Wednesday, April 24, 2024
Homeಅಪರಾಧಬೆಳ್ತಂಗಡಿ : ಹೆರಿಗೆ ವೇಳೆ ವಿಪರೀತ ರಕ್ತಸ್ರಾವ, ಬಾಣಂತಿ ಸಾವು

ಬೆಳ್ತಂಗಡಿ : ಹೆರಿಗೆ ವೇಳೆ ವಿಪರೀತ ರಕ್ತಸ್ರಾವ, ಬಾಣಂತಿ ಸಾವು

spot_img
- Advertisement -
- Advertisement -

ಬೆಳ್ತಂಗಡಿ : ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿ ಬಳಿಕ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದ ಘಟನೆ ಮಂಗಳವಾರ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಗೆ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ಉದಯ ನಾಯ್ಕ್ ರ ಪತ್ನಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ನಿವಾಸಿ ಶ್ರೀಮತಿ ಸುಜಾತ(32) ಅವರಿಗೆ ವೈದ್ಯರು ಆಪರೇಷನ್ ಮಾಡಿದ್ದು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಸುಜಾತರಿಗೆ ವಿಪರೀತ ರಕ್ತಸ್ರಾವ ಉಂಟಾಗಿದೆ. ತಕ್ಷಣ ವೈದ್ಯರು ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸಲಹೆ ನೀಡಿದ್ದಾರೆ. ಅದರಂತೆ ಮನೆಯವರು ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಬಾಣಂತಿ ಸಾವನ್ನಪ್ಪಿದ್ದಾರೆ.ಬಾಣಂತಿ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಶ್ರೀಮತಿ ಸುಜಾತ ಪುತ್ತೂರಿನಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಸಂಸ್ಥೆಯಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಇತ್ತೀಚೆಗೆ ಹಾಸನ ಜಿಲ್ಲೆಯ ಬೇಳೂರು ಯೋಜನಾ ಕಚೇರಿಯ ವ್ಯಾಪ್ತಿಯ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಯಾಗಿ ವರ್ಗಾವಣೆ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗರ್ಭಿಣಿಯಾಗಿರುವ ಕಾರಣ ರಜೆಯಲ್ಲಿದ್ದರು. ಗಂಡ ಉದಯ ನಾಯ್ಕ್ ಎಸ್.ಕೆ.ಡಿ.ಆರ್.ಡಿ.ಪಿ ಸಂಸ್ಥೆಯ ಹಾಸನ ಜಿಲ್ಲೆಯ ಬೇಳೂರು ಕಚೇರಿಯ ಮ್ಯಾನೇಜರ್ ಆಗಿ ಕರ್ತವ್ಯದಲ್ಲಿದ್ದಾರೆ.

ಉದಯ ನಾಯ್ಕ್ ಮತ್ತು ಶ್ರೀಮತಿ ಸುಜತಾ ದಂಪತಿಗೆ ಒಂದು ಗಂಡು ಮಗು ಇದ್ದು ಇದೀಗ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗು ಬದ್ಯಾರು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ.

- Advertisement -
spot_img

Latest News

error: Content is protected !!