Saturday, October 17, 2026
Homeಕರಾವಳಿಕೇರಳ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಜೊತೆಯಲ್ಲಿ ಉತ್ತೀರ್ಣರಾದ ತಾಯಿ- ಮಗ

ಕೇರಳ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಜೊತೆಯಲ್ಲಿ ಉತ್ತೀರ್ಣರಾದ ತಾಯಿ- ಮಗ

- Advertisement -
- Advertisement -

ಕೇರಳ: ತಾಯಿ ಹಾಗೂ ಮಗ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಜೊತೆಯಾಗಿ ಉತ್ತೀರ್ಣರಾದ ಸ್ಫೂರ್ತಿ ದಾಯಕ ಘಟನೆಯೊಂದು ಕೇರಳದಲ್ಲಿ ನಡೆದಿದೆ.

, 42 ವರ್ಷದ ಬಿಂದು ಅವರು ಕೆಳ ದರ್ಜೆಯ ನೌಕರಿ (ಎಲ್‌ಜಿಎಸ್) ಪರೀಕ್ಷೆಯಲ್ಲಿ 92ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದರೆ, ಅವರ 24 ವರ್ಷದ ಮಗ ವಿವೇಕ್ ಎಲ್‌ಡಿಸಿ ಪರೀಕ್ಷೆಯಲ್ಲಿ 38ನೇ ರ‍್ಯಾಂಕ್‌ ಪಡೆದಿದ್ದಾರೆ.

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ತಾಯಿ -ಮಗ ಇಬ್ಬರೂ ಒಟ್ಟಿಗೆ ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ನಿರಂತರ ಅಭ್ಯಾಸ ನಡೆಸಿದ್ದರು.

ಸದ್ಯ ಬಿಂದು ಅವರು ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.’ನಾನು ಒಬ್ಬಂಟಿಯಾಗಿ ಓದಲು ಇಷ್ಟಪಡುತ್ತೇನೆ. ನಮ್ಮ ತಾಯಿ ಯಾವಾಗಲೂ ಓದುವುದಿಲ್ಲ. ಆಕೆ ಸಮಯ ಸಿಕ್ಕಾಗ ಮಾತ್ರ ಅಭ್ಯಾಸ ನಡೆಸುತ್ತಿದ್ದರು’ ಎಂದು ವಿವೇಕ್ ಹೇಳಿದ್ದಾರೆ.

ಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳು ಹೇಗಿರಬೇಕು ಎಂಬುದಕ್ಕೆ ನಾನೇ ಅತ್ಯುತ್ತಮ ಉದಾಹರಣೆ. ನಾನು ನಿರಂತರವಾಗಿ ಅಧ್ಯಯನ ಮಾಡುವುದಿಲ್ಲ. ನಾನು ಪರೀಕ್ಷೆಯ ದಿನಾಂಕಕ್ಕಿಂತ ಆರು ತಿಂಗಳ ಮೊದಲು ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತೇನೆ ಎಂದು ವಿವೇಕ್‌ ವಿವರಿಸಿದ್ದಾರೆ. ಇದೀಗ ತಾಯಿ ಮಗ ತಮ್ಮ ಸಾಧನೆಯ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ

- Advertisement -

Latest News

error: Content is protected !!