Wednesday, June 17, 2026
Homeಕರಾವಳಿಮೊಹರಂ ಮೆರವಣಿಗೆ ವೇಳೆ ಇಬ್ಬರಿಗೆ ಚೂರಿ ಇರಿತ: ಓರ್ವನ ಸ್ಥಿತಿ ಗಂಭೀರ

ಮೊಹರಂ ಮೆರವಣಿಗೆ ವೇಳೆ ಇಬ್ಬರಿಗೆ ಚೂರಿ ಇರಿತ: ಓರ್ವನ ಸ್ಥಿತಿ ಗಂಭೀರ

- Advertisement -
- Advertisement -

ಗದಗ; ಮೊಹರಂ ಮೆರವಣಿಗೆ ವೇಳೆ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಘಟನೆ ಗದಗದ  ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ.

ತೌಸಿಫ್ ಹೊಸಮನಿ(23), ಮುಸ್ತಾಕ್ ಹೊಸಮನಿ (24) ಹಲ್ಲೆಗೊಳಗಾದವರು. ಇದರಲ್ಲಿ ತೌಸಿಫ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನಗೆ ಸಂಬಂಧಿಸಿ ಸೋಮೇಶ್ ಮತ್ತು ಯಲ್ಲಪ್ಪ ಎಂಬ ಇಬ್ಬರನ್ನು ಪೊಲೀಸರು‌ ವಶಕ್ಕೆ ಪಡೆದುಕೊಂಡಿದ್ದಾರೆ.

ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಗ್ರಾಮದಲ್ಲಿ ‌ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

- Advertisement -

Latest News

error: Content is protected !!