Monday, June 8, 2026
Homeಕರಾವಳಿಉಡುಪಿಕಾಪು: ಗುಂಡಿಬಿದ್ದ ರಸ್ತೆಗೆ ಸಾರ್ವಜನಿಕರಿಂದಲೇ ತೇಪೆ ಕಾರ್ಯ: ಇಲಾಖೆ ವಿರುದ್ಧ ಆಕ್ರೋಶ

ಕಾಪು: ಗುಂಡಿಬಿದ್ದ ರಸ್ತೆಗೆ ಸಾರ್ವಜನಿಕರಿಂದಲೇ ತೇಪೆ ಕಾರ್ಯ: ಇಲಾಖೆ ವಿರುದ್ಧ ಆಕ್ರೋಶ

- Advertisement -
- Advertisement -

ಕಾಪು: ಇಲ್ಲಿನ ರಾಜ್ಯ ಹೆದ್ದಾರಿ ಗಣಪತಿ ದೇವಸ್ಥಾನ ಮತ್ತು ಜುಮ್ಮಾ ಮಸೀದಿ ಬಳಿ ರಸ್ತೆ ಹದಗಡಟ್ಟಿದ್ದು, ವಾಹನ ಸಂಚರಿಸೋದೆ ದೊಡ್ಡ ಸವಾಲಾಗಿದೆ.

ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇದ್ರ ನಡುವೆ ಈ ಹದಗೆಟ್ಟ ರಸ್ತೆಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲೂ ಅಪ್‌ಲೋಡ್‌ ಮಾಡಲಾಗಿತ್ತು. ಇದನ್ನು ನೋಡಿದ ಸಾರ್ವಜನಿಕರು ತಾವೇ ರಸ್ತೆಗೆ ತೇಪೆ ಹಾಕಿ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ತಂಡದ ಸದಸ್ಯರು ಗುಂಡಿಗಳಿಗೆ ಜಲ್ಲಿ, ಕಾಂಕ್ರೀಟ್ ಹಾಕುವ ಮೂಲಕ ರಸ್ತೆ ಗುಂಡಿ ಮುಚ್ಚಿದ್ದಾರೆ. ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!