Saturday, May 18, 2024
Homeಕರಾವಳಿ'ಮನೆಯಲ್ಲೇ ಮಾಡೋಣ ಲೆಕ್ಕ' ವಿನೂತನ ಕಾರ್ಯಕ್ರಮ ಬಿಡುಗಡೆ; ಪೋಷಕರೆ ಮಕ್ಕಳ ಮೊದಲ ಗುರು- ಕ್ಷೇತ್ರ ಸಂಪನ್ಮೂಲ...

‘ಮನೆಯಲ್ಲೇ ಮಾಡೋಣ ಲೆಕ್ಕ’ ವಿನೂತನ ಕಾರ್ಯಕ್ರಮ ಬಿಡುಗಡೆ; ಪೋಷಕರೆ ಮಕ್ಕಳ ಮೊದಲ ಗುರು- ಕ್ಷೇತ್ರ ಸಂಪನ್ಮೂಲ ಅಧಿಕಾರಿ!

spot_img
- Advertisement -
- Advertisement -

ಮಂಗಳೂರು: ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಕೆ ಪುನರ್ ಆರಂಭವಾಗುವವರೆಗೆ ನಮಗಿರುವ ಒಂದೇ ದಾರಿ, ಮನೆಯನ್ನು ಕಲಿಕಾ ಸ್ಥಾನವಾಗಿ ಮಾಡುವುದು. ಈ ನಿಟ್ಟಿನಲ್ಲಿ ಅಕ್ಷರ ಫೌಂಡೇಶನ್ ಹೊರ ತಂದಿರುವ ಮನೆಯಲ್ಲೇ ಮಾಡೋಣ ಲೆಕ್ಕ ಎಂಬ ವಿನೂತನ ಕಾರ್ಯಕ್ರಮದಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುವುದರ ಜೊತೆಗೆ, ಮಕ್ಕಳ ಪೋಷಕರು ಶಿಕ್ಷಕರ ಪಾತ್ರವನ್ನು ನಿಭಾಯಿಸಬೇಕು, ಈ ಕಾರ್ಯಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕೆಂದು ಮಂಗಳೂರು ಉತ್ತರ ವಲಯ ವಿಭಾಗದ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಾ! ಮಂಜುಳಾ ಶೆಟ್ಟಿಯವರು ಹೇಳಿದರು.

ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ್, ಸಮುದಾಯ ತಂಡದ ನಾಯಕರು ,ಸ್ವಯಂ ಸೇವಕರು, ಹಾಗೂ ಅಕ್ಷರ ಫೌಂಡೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮನೆಯಲ್ಲೇ ಮಾಡೋಣ ಲೆಕ್ಕ ಇದರ ಜಿಲ್ಲಾ ಹಂತದ ಕಾರ್ಯಕ್ರಮ ಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮವು ಬೈಕಾಂಪಾಡಿ ವಿಧ್ಯಾರ್ಥಿ ಸಂಘದ ಚೊಮ ಪೂಜಾರಿ ವೇದಿಕೆಯಲ್ಲಿ ಜರುಗಿದ್ದು, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಿಕ್ಷಣ ಪ್ರೇಮಿ, ನಿವೃತ್ತ ಇಂಜಿನಿಯರ್ ಶ್ರೀ ವಾಸುದೇವ ಐತಾಳ್ ,ಮಾತಾನಾಡಿ ಕೊರೊನ ಸಂದರ್ಭದಲ್ಲಿ ಮಕ್ಕಳು ‌ಶಿಕ್ಷಣದ ಗುಣಮಟ್ಟದಲ್ಲಿ ಕ್ಷೀಣವಾಗುತ್ತಿರುವುದನ್ನು ಮನಗಂಡು ಅಕ್ಷರ ಫೌಂಡೇಶನ್ ಜೊತೆಯಲ್ಲಿ ನಾವು ದಕ್ಷಿಣ ಕನ್ನಡ ಜಿಲ್ಲೆ ಯಾದ್ಯಂತ ಸರಕಾರಿ ಶಾಲಾ ಮಕ್ಕಳಿಗೆ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ವನ್ನು ಮಾಡಲು ಸಹಕಾರ ನೀಡುವುದಾಗಿಯೂ, ಇದಕ್ಕೆ ಎಲ್ಲರ ಸಹಕಾರ ವಿರಲಿ ಎಂದು ನುಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ‌ಪ್ರಾಸ್ತಾವಿಕವಾಗಿ ಅಕ್ಷರ ಫೌಂಡೇಶನ್ ಇದರ ಜಿಲ್ಲಾ ಸಮನ್ವಯಾಧಿಕಾರಿ ನವೀನ್ ರವರು ಮಾತಾನಾಡಿದರು.ಕೊರೊನ ಸಂದರ್ಭದಲ್ಲಿ ಅಕ್ಷರ ಫೌಂಡೇಶನ್ ನ ಸಹಭಾಗಿತ್ವದಲ್ಲಿ ಪರ್ಯಾಯ ಗಣಿತ ಕಲಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸುವೇಗ ಪುಸ್ತಕವನ್ನು ಅಭ್ಯಾಸ ಮಾಡಲು ಶೈಕ್ಷಣಿಕ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ಶ್ರೀಮತಿ ಆಶಾಗಣೇಶ್ ಬೋಳೂರು ರವರಿಗೆ ಪ್ರಶಾಂಶ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್ ಶಿಕ್ಷಣ ಪ್ರೇಮಿ ಶ್ರೀಮತಿ ಜಯಶ್ರೀ ಐತಾಳ್, ಹಳೆ‌ ವಿದ್ಯಾರ್ಥಿ ಸಂಘದ ಅದ್ಯಕ್ಷ ಮಧುಕರ ಕಾಂಚಾನ್, ಬೈಕಾಂಪಾಡಿ ಮೊಗವೀರ ಮಹಾ ಸಭಾ ದ ಉಪಾಧ್ಯಕ್ಷ ಎನ್ ಆರ್ ಪುರುಷೋತ್ತಮ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ನವಿನಾಕ್ಷಿ, ಶಿಕ್ಷಣ ಪ್ರೇಮಿ ತಂಡದ ನಾಯಕ ಗಣೇಶ ಬೋಳೂರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಂರಕ್ಷಣ ಅಧಿಕಾರಿ ಶ್ರೀಮತಿ ನೂರಾಬಿ ಎಸ್, ಪಂಚಾಯತ್ ಸದಸ್ಯರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀನಕಳಿಯ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಎ, ಸ್ವಾಗತಿಸಿದರು.ಶಾಲಾ ಶಿಕ್ಷಕಿ ಸುಮಾ ಎಸ್.ಡಿ ರವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ವನಿತಾರವರು ವಂದಿಸಿದರು. ಶಾಲಾ ಶಿಕ್ಷಕರು, ಎಸ್ ಡಿ. ಎಂ ಸಿ ಸದಸ್ಯರು , ಪೋಷಕರು ಶೈಕ್ಷಣಿಕ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

- Advertisement -
spot_img

Latest News

error: Content is protected !!