Wednesday, October 14, 2026
Homeತಾಜಾ ಸುದ್ದಿಚಿರು ಆತ್ಮದ ಜೊತೆ ಪ್ಯಾರಾನಾರ್ಮಲ್ ತಜ್ಞನ ಮಾತುಕತೆ.. ಏನ್ ಹೇಳಿದ್ರು ವಾಯುಪುತ್ರ?

ಚಿರು ಆತ್ಮದ ಜೊತೆ ಪ್ಯಾರಾನಾರ್ಮಲ್ ತಜ್ಞನ ಮಾತುಕತೆ.. ಏನ್ ಹೇಳಿದ್ರು ವಾಯುಪುತ್ರ?

- Advertisement -
- Advertisement -

ಬೆಂಗಳೂರು :  ನಟ ಚಿರಂಜೀವಿ ಸರ್ಜಾ ಅವರ ಆತ್ಮದ ಜೊತೆ ಮಾತುಕತೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ಯಾರಾನಾರ್ಮಲ್ ತಜ್ಞ ಚಿರಂಜೀವಿ ಅವರನ್ನು  ಮಾತನಾಡಿಸಲು ಪ್ರಯತ್ನಿಸಿರುವ ವಿಡಿಯೋ ಇದೀಗ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೇ ಪ್ಯಾರಾನಾರ್ಮಲ್ ತಜ್ಞ ಚಾರ್ಲಿ ಚಿಟ್ಟೆಂಡೆನ್ ಯೂ ಟ್ಯೂಬ್ ನಲ್ಲಿ ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಆರಂಭದಲ್ಲಿ ಚಿರು ಅವರ ಹುಟ್ಟಿದ ದಿನ ಹಾಗೂ ವರ್ಷವನ್ನು ಕೇಳಿ ಅವರ ಆತ್ಮದ ಜೊತೆ ಮಾತುಕತೆಯನ್ನು ಆರಂಭ ಮಾಡಲಾಗುತ್ತದೆ. ಬಳಿಕ ಸಾವಿನ ದಿನಾಂಕವನ್ನು ಕೇಳಿ ಪ್ಯಾರಾನಾರ್ಮಲ್ ತಜ್ಞ ಮಾತನ್ನು ಮುಂದುವರೆಸುತ್ತಾರೆ.ಆದರೆ  ಎಲ್ಲಿಯೂ ಚಿರು ಅವರ ಧ್ವನಿಯಾಗಲಿ ಅಥವಾ ಇನ್ನೇನು ಸೂಚನೆಯಾಗಲಿ ಕೇಳೋದಿಲ್ಲ. ರೇಡಿಯೋದ ರೀತಿಯ ಸೌಂಡ್ ಮಾತ್ರ ಕೇಳಿಸುತ್ತದೆ.

ಆದರೆ ಪ್ಯಾರಾನಾರ್ಮಲ್ ತಜ್ಞ ಮಾತ್ರ ಬಿಪ್  ಆಡಿಯೋ ಡಿಸ್ಟರ್ಬ್ ಆಗೋದೇ ಆತ್ಮದ ಸನ್ನೆ ಎಂದಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಆತ್ಮದ ಜೊತೆ ಮಾತನಾಡುತ್ತಾ ನಿಮಗೆ ಅಭಿಮಾನಿಗಳಿಂದ ಒಂದು ಸಂದೇಶ ಇದೆ ಎಂದು ಕೂಡ ಹೇಳಿದ್ದಾರೆ. 3 ನಿಮಿಷ 54 ಸೆಕೆಂಡ್ ಇರುವ ಈ ವಿಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗಷ್ಟೇ ಪ್ಯಾರಾನಾರ್ಮಲ್ ತಜ್ಞ ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆ ಮಾತನಾಡಿದ್ದರು.

- Advertisement -

Latest News

error: Content is protected !!