Thursday, June 4, 2026
Homeತಾಜಾ ಸುದ್ದಿವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಮಾಡಿದ ಖರ್ಚು ಎಷ್ಟು ಗೊತ್ತಾ?

ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಮಾಡಿದ ಖರ್ಚು ಎಷ್ಟು ಗೊತ್ತಾ?

- Advertisement -
- Advertisement -

ನವದೆಹಲಿ : ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸಿ ಕೊಡಲು 2142 ಕೋಟಿ ರುಪಾಯಿ ಖರ್ಚಾಗಿದೆ. ಇದೇ ಅವಧಿಯಲ್ಲಿ ರೈಲ್ವೆ ಇಲಾಖೆಗೆ 429 ಕೋಟಿ ರುಪಾಯಿ ಶ್ರಮಿಕ್ ರೈಲುಗಳಿಂದ ಆದಾಯ ಬಂದಿದೆ.ಲಾಕ್‌ಡೌನ್ ಅವಧಿಯಲ್ಲಿ 4615 ರೈಲುಗಳು ಕಾರ್ಯಾಚರಣೆ ನಡೆಸಿವೆ.
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಆಗದೇ ತೀವ್ರ ತೊಂದರೆ ಅನುಭವಿಸಿದ್ದರು. ಕಡೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡಲು ಶ್ರಮಿಕ್ ರೈಲಿನ ವ್ಯವಸ್ಥೆ ಮಾಡಿ ಕಾರ್ಮಿಕರನ್ನು ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು .
ಒಟ್ಟಾರೆಯಾಗಿ ಹೇಳುವುದಾದರೆ ಸರಕಾರಕ್ಕೆ ಶ್ರಮಿಕ್ ರೈಲ್ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ

- Advertisement -

Latest News

error: Content is protected !!