Friday, June 5, 2026
Homeಕರಾವಳಿಪುತ್ತೂರು; ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಪಾನ್ ವಾಲಾ ಅರೆಸ್ಟ್

ಪುತ್ತೂರು; ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಪಾನ್ ವಾಲಾ ಅರೆಸ್ಟ್

- Advertisement -
- Advertisement -

ಪುತ್ತೂರು; ನಿಷೇಧಿತ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಪಾನ್ ವಾಲಾವನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಪುತ್ತೂರು ಕಸಬಾ ಗ್ರಾಮದ ,  ಲಿನೆಟ್‌  ಜಂಕ್ಷನ್‌‌ನ ಉದಯಗಿರಿ  ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ  ಬಳಿ ನಡೆದಿದೆ.

ಪಾನ್ ವಾಲಾ ಲಕ್ಷ್ಮಣ ಎಂಬಾತನು, ನಿಷೇಧಿತ ಕೇರಳದ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ, ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ ರವರು ಹಾಗೂ ಸಿಬ್ಬಂದಿ, ಆರೋಪಿಯನ್ನು ವಿಚಾರಿಸಿದಾಗ ಆತನು ನಿಷೇಧಿತ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ಬಗ್ಗೆ ತಪಾಸಣೆ ನಡೆಸಿದಾಗ ಒಟ್ಟು ರೂ 1,550/- ಮೌಲ್ಯದ 31 ಲಾಟರಿ ಟಿಕೇಟ್‌ ಗಳು ಹಾಗು ಲಾಟರಿ ಮಾರಾಟ ಮಾಡಿ ಬಂದ ರೂ 1,100/- ನಗದು ದೊರಕಿರುತ್ತದೆ. ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾದೀನಪಡಿಸಿ, ಆರೋಪಿಯ ವಿರುದ್ದ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ  ಅ.ಕ್ರ:    33/2024 ಕಲಂ;-  5,7(3) The lotteries (Regulation) Act 1998  ಕಾಯ್ದೆಯಡಿ ಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!