Tuesday, April 30, 2024
Homeಕರಾವಳಿಕೋಳಿ ಗೂಡಿಗೆ ನುಗ್ಗಿ ಕೋಳಿ ತಿಂದ ಚಿರತೆ; ಜನರಲ್ಲಿ ಹೆಚ್ಚಿದ ಆತಂಕ 

ಕೋಳಿ ಗೂಡಿಗೆ ನುಗ್ಗಿ ಕೋಳಿ ತಿಂದ ಚಿರತೆ; ಜನರಲ್ಲಿ ಹೆಚ್ಚಿದ ಆತಂಕ 

spot_img
- Advertisement -
- Advertisement -

ಉಡುಪಿ: ಇಲ್ಲಿನ ಮಣಿಪಾಲದ ಸರಳೆಬೆಟ್ಟುವಿನಲ್ಲಿ  ಚಿರತೆಯೊಂದು ಕೋಳಿ ಗೂಡಿಗೆ ನುಗ್ಗಿ, ಕೋಳಿ ತಿಂದಿರುವ ಘಟನೆ ನಡೆದಿದೆ.

ಈ ಘಟನೆಯು ಸರಳಬೆಟ್ಟುವಿನ ರಾಮಮಂದಿರದ ಸಮೀಪ ಸುನಿತಾ ಡಿಸೋಜಾ ಎಂಬವರ ಮನೆಯಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಕೋಳಿಗೂಡಿಗೆ ದಾಳಿ ನಡೆಸಿದ ಚಿರತೆ, ಕೋಳಿ ಗೂಡಿನಲ್ಲಿದ್ದ ಎರಡು ಕೋಳಿಗಳನ್ನು ತಿಂದಿದ್ದು,  ಒಂದು ಕೋಳಿಯನ್ನು ಗೂಡಿನಲ್ಲಿಯೇ ಬಿಟ್ಟು ಓಡಿ ಹೋಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಮಣಿಪಾಲದ ಸುತ್ತಮುತ್ತ ಪ್ರದೇಶಗಳಾದ ಸೆರಳೆಬೆಟ್ಟು ಕೋಡಿ, ಎಂಡ್ ಪಾಯಿಂಟ್, ಕೆಳಪರ್ಕಕಳ, ಸಣ್ಣಕ್ಕಿ ಬೆಟ್ಟು, ಪರ್ಕಳ ಗ್ಯಾಟ್ಸನ್ ಪರಿಸರ ಸೇರಿದಂತೆ ಮೊದಲಾದ ಕಡೆ ಚಿರತೆ ಸಂಚಾರ ಕಂಡು ಬಂದಿದ್ದು, ಅದರ ಹಾವಳಿ ಹೆಚ್ಚಾಗಿದೆ. ಸ್ಥಳೀಯರು ಈ ಪರಿಸರದಲ್ಲಿ ಎರಡು-ಮೂರು ಚಿರತೆ ಇದೆ ಎಂದು ಹೇಳುತ್ತಿದ್ದಾರೆ. ಈ ಭಾಗದಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

- Advertisement -
spot_img

Latest News

error: Content is protected !!