Monday, May 6, 2024
Homeತಾಜಾ ಸುದ್ದಿ'26/11 ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್ 'ಹಫೀಜ್ ಶಾಹೀದ್'ಗೆ 10 ವರ್ಷ ಜೈಲು ಶಿಕ್ಷೆ

’26/11 ಮುಂಬೈ ದಾಳಿ’ಯ ಮಾಸ್ಟರ್ ಮೈಂಡ್ ‘ಹಫೀಜ್ ಶಾಹೀದ್’ಗೆ 10 ವರ್ಷ ಜೈಲು ಶಿಕ್ಷೆ

spot_img
- Advertisement -
- Advertisement -

ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರಿಗೆ ಎರಡು ಭಯೋತ್ಪಾದಕ ಪ್ರಕರಣಗಳಲ್ಲಿ 10 ವರ್ಷ ಶಿಕ್ಷೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯವು ಆದೇಶ ಹೊರಡಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

2008ರಲ್ಲಿ ಮುಂಬೈ ದಾಳಿ ನಡೆದಿತ್ತು. ಈ ದಾಳಿ ವೇಳೆ 166 ಜನರು ಮೃತಪಟ್ಟಿದ್ದರು. ಈ ದಾಳಿಯ ಮುಖ್ಯ ರುವಾರಿ ಹಫೀಜ್​ನನ್ನು ಕಳೆದ ವರ್ಷ ಜುಲೈ 17ರಂದು ಬಂಧಿಸಿಡಲಾಗಿತ್ತು. ಎರಡು ಕಡೆಗಳಲ್ಲಿ ಭಯೋತ್ಪಾದನೆಗೆ ಹಣ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 11 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗ ಬೇರೆ ಎರಡು ಪ್ರಕರಣಗಳಲ್ಲಿ ಕೋರ್ಟ್​ ಈತನಿಗೆ ಮತ್ತೆ 10 ವರ್ಷ ಜೈಲು ಶಿಕ್ಷೆ ನೀಡಿದೆ. ಹಫೀಜ್​ ಹಾಗೂ ಆತನ ಇಬ್ಬರು ಸಹಚರರಾದ ಜಫರ್​ ಇಕ್ಬಾಲ್​ ಹಾಗೂ ಯಹ್ಯಾ ಮುಜಾಹಿದ್​ಗೆ ಹತ್ತೂವರೆ ವರ್ಷ ಜೈಲು ಶಿಕ್ಷೆ ಹಾಗೂ ಹಫೀಜ್​ ಭಾವ ಅಬ್ದುಲ್​ ರೆಹ್ಮಾನ್​ಗೆ 6 ತಿಂಗಳು ಜೈಲು ಶಿಕ್ಷೆ ನೀಡಿದೆ.

ಹಫೀಜ್​ ವಿರುದ್ಧ ಒಟ್ಟು 41 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 24 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ. ಇನ್ನು ಉಳಿದ ಪ್ರಕರಣಗಳ ವಿಚಾರ ನಡೆಯುತ್ತಿದ್ದು, ಶೀಘ್ರವೇ ತೀರ್ಪು ಹೊರ ಬರಲಿದೆ.

- Advertisement -
spot_img

Latest News

error: Content is protected !!