Sunday, June 7, 2026
Homeತಾಜಾ ಸುದ್ದಿದಲೈಲಾಮಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ: ಈ ಕುರಿತು ಭಾರತವನ್ನು ಟೀಕಿಸಿದ ಚೀನಾ

ದಲೈಲಾಮಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ: ಈ ಕುರಿತು ಭಾರತವನ್ನು ಟೀಕಿಸಿದ ಚೀನಾ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಟಿಬೆಟ್ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರ 87ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಇದನ್ನು ಚೀನಾ ಗುರುವಾರ ಟೀಕಿಸಿದೆ. ‘ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಭಾರತವು ಟಿಬೆಟ್ ಸಂಬಂಧಿತ ವಿಷಯಗಳನ್ನು ಬಳಸುವುದನ್ನು ನಿಲ್ಲಿಸಬೇಕು’ ಎಂದು ಚೀನಾ ಭಾರತಕ್ಕೆ ಎಚ್ಚರಿಕೆ ರವಾನಿಸಿದೆ.

ಚೀನಾದ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ “ಟಿಬೆಟಿಯನ್ ಆಧ್ಯಾತ್ಮಿಕ ಚಿಂತಕ ದಲೈಲಾಮಾ ಅವರನ್ನು ಗೌರವಾನ್ವಿತ ಅತಿಥಿಯಾಗಿ ಪರಿಗಣಿಸಿವುದು ಭಾರತ ನೀತಿಯಾಗಿದೆ” ಎಂದಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಲೈಲಾಮಾ ಅವರಿಗೆ ಪೋನಿನ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

- Advertisement -

Latest News

error: Content is protected !!