- Advertisement -
![]()
- Advertisement -
ಮಂಗಳೂರು; ಡೆಂಗ್ಯೂವಿನಿಂದ ಸಾವನ್ನಪ್ಪಿದ ಮಗನ ಅಂಗಾಂಗ ದಾನ ಮಾಡಿ ಹೆತ್ತವರು ಸಾರ್ಥಕತೆ ಮೆರೆದಿದ್ದಾರೆ.ಮಂಗಳೂರಿನ ಅತ್ತಾವರದ ಅಲ್ಫೋನ್ಸ್ ಹಾಗೂ ಸೋನಿಯಾ ಡಿಸೋಜ ಅವರ ಪುತ್ರ 13 ವರ್ಷದ ಆಶಿಶ್ ಡಿಸೋಜ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದ. ಮಗನ ಅಗಲಿಕೆಯ ನೋವಿನಲ್ಲೂ ದಂಪತಿ ಆತನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಇನ್ನು ಬಾಲಕನ ಹೆತ್ತವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಆಶಿಶ್ ಎರಡು ಕಣ್ಣುಗಳನ್ನ ದಾನ ಮಾಡುವುದರ ಜೊತೆಗೆ ದೇಹ ದಾನವನ್ನ ಕೂಡ ಮಾಡಿದ್ದಾರೆ. ದಂಪತಿಯ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇತರರಿಗೆ ಪ್ರೇರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಂದಿದ್ದಾರೆ.ಅಲ್ಲದೇ ದಂಪತಿಯನ್ನು ಸನ್ಮಾನಿಸಿದರು.
- Advertisement -


