Tuesday, May 21, 2024
Homeತಾಜಾ ಸುದ್ದಿವಿದ್ಯಾರ್ಥಿಗಳ ಫಿಟ್ನೆಸ್‌ ಕಡೆ ಆಸ್ಥೆ ವಹಿಸಿದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆ

ವಿದ್ಯಾರ್ಥಿಗಳ ಫಿಟ್ನೆಸ್‌ ಕಡೆ ಆಸ್ಥೆ ವಹಿಸಿದ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆ

spot_img
- Advertisement -
- Advertisement -

ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕೋವಿಡ್‌ ನಂತರ ಮಕ್ಕಳು ಎಲೆಕ್ಟ್ರಾನಿಕ್‌ ಗಾಜೆಟ್ಟ್‌ಗಳೊಡನೆ ಜಾಸ್ತಿ ಸಮಯವನ್ನು ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಸದೃಢತೆ ಕುಂಠಿತವಾಗುತ್ತಿದೆ. ಜಂಕ್‌ ಫುಡ್‌ ನ ಅತಿಯಾದ ಸೇವನೆಯು ಆರೋಗ್ಯವನ್ನು ಹದಗೆಡಿಸಿ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆಫ್ಲೈನ್‌ ತರಗತಿಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳ  ನಡವಳಿಕೆಯನ್ನು ಸೂಕ್ಷವಾಗಿ ಗಮನಿಸಿದ ಆರ್ಕಿಡ್ಸ್‌ ಅಂತಾರಾಷ್ಟ್ರೀಯು ಶಾಲೆಯು ತನ್ನ ವಿದ್ಯಾರ್ಥಿಗಳಿಗೆ “ ಫಿಟ್ನೆಸ್‌ ಕಾರ್ಯಕ್ರಮ ಪರಿಚಯಿಸಿದೆ.

ಬೆಂಗಳೂರಿನಲ್ಲಿರುವ ಆರ್ಕಿಡ್ಸ್‌ ನ 19 ಶಾಖೆಗಳಲ್ಲಿ ಬಿಎಂಐ ಸಮೀಕ್ಷೆ ನಡೆಸಿದಾಗ, ಶೇ 50ರಷ್ಟು ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಬಿಎಂಐ ಫಲಿತಾಂಶ ಕಂಡುಬಂದಿದೆ. ಸುಮಾರು 7000ಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಬಿಎಂಐ ಕಡಿಮೆ ತೂಕ, ಅಧಿಕ ತೂಕ ಹಾಗೂ ಬೊಜ್ಜು ಇರುವುದನ್ನು ಪ್ರತಿಪಾದಿಸುತ್ತಿದೆ.   ಸುಮಾರು 14,719 ವಿದ್ಯಾರ್ಥಿಗಳ ಬಿಎಂಐ ಮಾಪನ ಮಾಡಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯ ವೈಯುಕ್ತಿಕ ಸಮಾಲೋಚನೆ ನಡೆಸಲಾಗಿದೆ.

ಬಿಎಂಐ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ಅಥ್ಲೆಟಿಕ್ ಕೌಶಲಗಳನ್ನು ಅಭಿವೃದ್ಧಿಪಡಿಸಲು ‘ಗೆಟ್ ಫಿಟ್’ ಎಂಬ ವಿಶೇಷ ಕಾರ್ಯಕ್ರಮವನ್ನು ರೂಪಿಸಿ, ಎಲ್ಲಾ ಶಾಖೆಗಳಲ್ಲಿ ಇದನ್ನು ಅನುಷ್ಥಾನಗೊಳಿಸಲಾಗಿದೆ. ಗೆಟ್‌ ಫಿಟ್‌ ಕಾರ್ಯಕ್ರಮವು ದೀರ್ಘಾವಧಿಯ ಕಾರ್ಯಕ್ರಮವಾಗಿದ್ದು, ಪ್ರಾಥಮಿಕ ಹಂತದಲ್ಲಿ ಮಗುವಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ  ಸೂಕ್ತ ತರಬೇತಿ ನೀಡಲಾಗುತ್ತದೆ.

ಮಕ್ಕಳಲ್ಲಿ ಆರೋಗ್ಯಕರ ಆಹಾರಾಭ್ಯಾಸವನ್ನು ಬೆಳೆಸಲು nutrtitionist ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಪೌಷ್ಟಿಕ ಆಹಾರದ ಪ್ರಾಮುಖ್ಯತೆ ಬಗ್ಗೆ ತಿಳಿಸಿ ಡಯಟ್‌ ಚಾರ್ಟ್‌ ನೀಡಿದ್ದಾರೆ. ಇದಲ್ಲದೇ ವಾರದ ಆರು ದಿನವು ವಿದ್ಯಾರ್ಥಿಗಳ ದೈಹಿಕ ಸದೃಢತೆಗಾಗಿ ವಿಶೇಷ ವ್ಯಾಯಾಮ ಹಾಗೂ ತಾಲೀಮು ನಡೆಸಲಾಗುತ್ತಿದೆ.

ಗೆಟ್ ಫಿಟ್ ಕಾರ್ಯಕ್ರಮದ ರೂವಾರಿ, ಮಂಜುಳಾ ಮಾತನಾಡಿ,  “ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ.  ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸುಧಾರಣೆಗಾಗಿ ಆರ್ಕಿಡ್ಸ್‌ ಸಂಸ್ಥೆ ಸಕಲ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದು, ಭವಿಷ್ಯದಲ್ಲಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯುವುದು ನಮ್ಮ ಗುರಿಯಾಗಿದೆ. ಮಕ್ಕಳ ದೈನಂದಿನ ಚಟುವಟಿಕೆಗಳಿಗೆ ಫಿಟ್ನೆಸ್‌ ಅತ್ಯಗತ್ಯ ಎಂಬುದು ಬಿಎಂಐ ಸಮೀಕ್ಷೆಯಿಂದ ನಮಗೆ ಅರಿವಾಗಿದೆ. ಒಟ್ಟಾರೆ ಈ ಕಾರ್ಯಕ್ರಮದಿಂದ ಮಕ್ಕಳ ದೈಹಿಕ ಆರೋಗ್ಯ ಉತ್ತಮವಾಘುವುದರ ಜೊತೆಗೆ ಏಕಾಗ್ರತೆ ವೃದ್ಧಿಸಿ ಶೈಕ್ಷಣಿಕವಾಆಗಿ ಪ್ರಗತಿ ಸಾಧಿಸಲು  ಸಹಾಯ ಮಾಡುತ್ತದೆ” ಎಂದಿದ್ದಾರೆ.

- Advertisement -
spot_img

Latest News

error: Content is protected !!