Tuesday, June 9, 2026
Homeಕರಾವಳಿಬೆಳ್ತಂಗಡಿ :ಉಜಿರೆಯ ಮುಂಡತ್ತೋಡಿ ವ್ಯಕ್ತಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ

ಬೆಳ್ತಂಗಡಿ :ಉಜಿರೆಯ ಮುಂಡತ್ತೋಡಿ ವ್ಯಕ್ತಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ : ವಿವಾಹಿತ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಜಿರೆಯ ಮುಂಡತ್ತೋಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿಗಳಾದ ಸಂಜೀವ ಮತ್ತು ಪುಷ್ಪಾ ದಂಪತಿಗಳ ಮಗನಾದ ಪ್ರಭಾಕರ ಪೂಜಾರಿ(41)  ಮನೆಯಲ್ಲಿ ಇಂದು ಮಧ್ಯಾಹ್ನ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಭಾಕರ ಪೂಜಾರಿ ಮುಂಡತ್ತೋಡಿ ಶ್ರೀ ಯುವಕ ಮಂಡಲದ ಸದಸ್ಯರು ಆಗಿದ್ದಾರೆ. ಈ ಹಿಂದೆ ಆಟೋ ಚಾಲಕರಾಗಿದ್ದು. ಕಳೆದ ಕೆಲ ದಿನಗಳಿಂದ ಮನೆಯಲ್ಲಿಯೇ ಇದ್ದರು‌.ಎರಡು ವರ್ಷದ ಹಿಂದೆ ಮುಂಡಾಜೆಯ ಸೀಟ್ ಬಳಿ ನಡೆದ  ಅಪಘಾತದಲ್ಲಿ ಮೃತಪಟ್ಟ ಪ್ರಭಾಕರವರ ತಮ್ಮ ಪ್ರಶಾಂತ್ ಪೂಜಾರಿ ಸಾವನ್ನಪ್ಪಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಪ್ರಭಾಕರ ಪೂಜಾರಿಯವರು ಪತ್ನಿ ಮೀನಾಕ್ಷಿ ಮತ್ತು 5 ವರ್ಷದ ಹೆಣ್ಣು‌ ಒಂದು ಮಗುವನ್ನು ಅಗಲಿದ್ದಾರೆ.

- Advertisement -

Latest News

error: Content is protected !!