Wednesday, June 3, 2026
Homeಕರಾವಳಿಆಪರೇಷನ್ ಎಲಿಫೆಂಟ್ ಕೊನೆಗೂ ಸಕ್ಸಸ್ ; ಇಬ್ಬರನ್ನು ಬಲಿ ಪಡೆದ ನರಹಂಕಕ ಕಾಡಾನೆ ಸೆರೆ

ಆಪರೇಷನ್ ಎಲಿಫೆಂಟ್ ಕೊನೆಗೂ ಸಕ್ಸಸ್ ; ಇಬ್ಬರನ್ನು ಬಲಿ ಪಡೆದ ನರಹಂಕಕ ಕಾಡಾನೆ ಸೆರೆ

- Advertisement -
- Advertisement -

ಕಡಬ; ಇಬ್ಬರನ್ನು ಬಲಿ ಪಡೆದ ನರಹಂತಕ ಆನೆ ಕೊನೆಗೂ ಸೆರೆಯಾಗಿದೆ. ಆ ಮೂಲಕ ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಕೊನೆಗೂ ಸಕ್ಸಸ್ ಆಗಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ.

ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇ ಮೈಸೂರು ದುಬಾರೆಯಿಂದ 5 ಆನೆಗಳನ್ನು ತರಲಾಗಿದ್ದು, ಫೆ.21 ರಂದು ಡ್ರೋನ್  ಕ್ಯಾಮರಾ ಬಳಸಿ  ಆನೆಯನ್ನು ಪತ್ತೆ ಹಚ್ಚಲಾಗಿತ್ತು.

ದುಬಾರೆಯ ಆನೆಗಳ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭಗೊಂಡಿತ್ತು. ಆದರೆ ನಿನ್ನೆ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ವಿಫಲಗೊಂಡಿತ್ತು. ಇಂದು ಸಂಜೆ ಮತ್ತೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ಶೂಟ್ ಮಾಡಿ ಆನೆಯನ್ನು ಸೆರೆ ಹಿಡಿಯಲಾಗಿದೆ.

- Advertisement -

Latest News

error: Content is protected !!