Saturday, June 6, 2026
Homeಕರಾವಳಿಚಿಕ್ಕಮಗಳೂರಿನ ಹಲವೆಡೆ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ; ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ,...

ಚಿಕ್ಕಮಗಳೂರಿನ ಹಲವೆಡೆ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ; ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ, 6 ಜನರ ಬಂಧನ

- Advertisement -
- Advertisement -

ಚಿಕ್ಕಮಗಳೂರಿನ ಹಲವೆಡೆ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ ನಡೆಸಿದ ಪೊಲೀಸರು ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ವಶಕ್ಕೆ ಪಡೆದು ಆರು ಜನರನ್ನು ಬಂಧಿಸಿದ್ದಾರೆ. ಬಾಳೆಹೊನ್ನೂರು ,ಬಾಳೂರು, ಕಳಸ ಹಾಗು ಎನ್ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.

ಪರವಾನಿಗೆ ರಹಿತ 41 , ಪರವಾನಿಗೆ  ಸಹಿತ 10 ಬಂದೂಕು, ಎರಡು ರಿವಾಲ್ವರ್,22 ರೈಫಲ್ ಗುಂಡು,40 ಬುಕ್ ಶಾಟ್ ಗುಂಡು, ಬಂದೂಕು ನಳಿಕೆ, ಕಾರ್ಟ್ರೆಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ನೇತ್ರಕುಂಡ ಎಸ್ಟೇಟಿನ ಸದಾಶಿವಾಚಾರ್, ಬಾಳೂರಿನ ಸುಧಾಕರ್ ಆಚಾರಿ , ಬಾಳೆಹೊನ್ನೂರಿನ ರಾಮಚಂದ್ರ ಆಚಾರಿ, ಮಾವಿನಕೆರೆಯ ಸುಂದರ, ಗಂಗಾಧರ, ಆಡುವಳ್ಳಿಯ ಶಿವರಾಜ್ ನನ್ನು ಬಂಧಿಸಲಾಗಿದೆ .

- Advertisement -

Latest News

error: Content is protected !!