Sunday, June 7, 2026
Homeಅಪರಾಧಮಂಗಳೂರು : ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ ವಂಚನೆ!!

ಮಂಗಳೂರು : ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ ವಂಚನೆ!!

- Advertisement -
- Advertisement -

ಮಂಗಳೂರು : ಕ್ರೆಡಿಟ್ ಕಾರ್ಡ್‌ನ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ನಂಬಿಸಿ ವಂಚನೆ ಮಾಡಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಅನ್ನು ಹೊಂದಿದ್ದ ದೂರುದಾರರ ಮೊಬೈಲ್‌ಗೆ ಮಹಿಳೆಯೊಬ್ಬರು ಕರೆ ಮಾಡಿ ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಕಚೇರಿಯಿಂದ ಕರೆ ಮಾಡುವುದಾಗಿ ನಂಬಿಸಿದ್ದಾರೆ.

ಬಳಿಕ ತಾನು ಕ್ರೆಡಿಟ್ ಕಾರ್ಡ್ ಪರಿಶೀಲನೆ ಬಗ್ಗೆ ಕರೆ ಮಾಡಿದ್ದು, ನಿಮ್ಮ ಕ್ಯಾಶ್ ಮತ್ತು ಕ್ರೆಡಿಟ್ ಲಿಮಿಟ್ ಜಾಸ್ತಿ ಮಾಡುವುದಾಗಿ ತಿಳಿಸಿ, ನಂತರ ಒಟಿಪಿ ಶೇರ್ ಮಾಡಲು ತಿಳಿಸಿದ್ದಾರೆ. ಅದರಂತೆ ಒಟಿಪಿ ನಂಬರ್ ನೀಡಿದ ಕೂಡಲೇ ದೂರುದಾರರ ಖಾತೆಯಿಂದ 99,274ರೂ. ವರ್ಗಾವಣೆಯಾಗಿದೆ. ತದನಂತರ ಕ್ರೆಡಿಟ್‌ಕಾರ್ಡ್‌ನಿಂದ ಹಂತಹಂತವಾಗಿ 6,94,918ರೂ. ವರ್ಗಾವಣೆ ಮಾಡಲಾಗಿದೆ.ಈ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!