ಉಡುಪಿ: ಹಿರಿಯ ನಾಗರಿಕರೊಬ್ಬರು ಆನ್‌ಲೈನ್ ವಂಚಕರ ಆಮಿಷಕ್ಕೆ ಒಳಗಾದ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ವಂಚನೆಗೆ ಒಳಗಾದವರು ಉಪೇಂದ್ರ (72). ಯಾರೋ ಅಪರಿಚಿತ ವ್ಯಕ್ತಿಗಳು ಇವರನ್ನು ವಾಟ್ಸ್ ಆ್ಯಪ್‌ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೇಲ್ತ್ ಮ್ಯಾನೇಜ್ಮೆಂಟ್ ಗ್ರೂಪ್‌ಗೆ ಸೇರಿಸಿದ್ದು, ನಂತರದಲ್ಲಿ ಆ ಗ್ರೂಪಿನ ಐಕನ್ ನಿಂದ ಅಕೌಂಟ್ ನಂಬರ್ ನೀಡಿದ್ದಾರೆ.
ವಾಟ್ಸ್ ಆ್ಯಪ್‌ನಲ್ಲಿ ಈ ವೇಳೆ ಅವರಿಗೆ ಟ್ರೇಡಿಂಗ್ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ, ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಅವರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜು. 4ರಿಂದ 24ರ ವರೆಗೆ ಹಂತ ಹಂತವಾಗಿ ಒಟ್ಟು 33,10,000 ರೂ.ಗಳನ್ನು ಡಿಪಾಸಿಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈವರೆಗೂ ವಂಚಕರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


