Saturday, May 18, 2024
Homeಕರಾವಳಿಬೆಳ್ತಂಗಡಿ : ಮ್ಯಾಕ್ಸ್ ಲೈಫ್‌ ಇನ್ಸೂರೆನ್ಸ್ ಹೆಸರಲ್ಲಿ OTP ಕೇಳಿದ ವಂಚಕರು: ಇಬ್ಬರಿಗೆ 2,25,000 ರೂ...

ಬೆಳ್ತಂಗಡಿ : ಮ್ಯಾಕ್ಸ್ ಲೈಫ್‌ ಇನ್ಸೂರೆನ್ಸ್ ಹೆಸರಲ್ಲಿ OTP ಕೇಳಿದ ವಂಚಕರು: ಇಬ್ಬರಿಗೆ 2,25,000 ರೂ ದೋಖಾ

spot_img
- Advertisement -
- Advertisement -

ಬೆಳ್ತಂಗಡಿ : ವ್ಯವಹಾರ ಸಂಬಂಧ ಬ್ಯಾಂಕ್ ನಿಂದ ಲೋನ್ ಪಡೆದಿದ್ದಕ್ಕೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಇನ್ಸೂರೆನ್ಸ್ ಮಾಡಿಸಲು ಕಸ್ಟಮರ್ ಕೇರ್ ನಂಬರಿಗೆ ಕರೆ ಮಾಡಿದಾಗ ವಂಚಕರ ಕೈಗೆ ಸಿಕ್ಕಿ Any Desk app ಮೂಲಕ  ಇಬ್ಬರು ಸ್ನೇಹಿತರು  ಹಂತ ಹಂತವಾಗಿ 2,25125 ರೂಪಾಯಿ ವಂಚನೆಗೊಳಗಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ನಗರದ ಚಿನ್ನದ ವ್ಯಾಪಾರಿ ಮತ್ತು ಆತನ ಸ್ನೇಹಿತ ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಜೊತೆಯಲ್ಲಿ ಇರುವಾಗ ಚಿನ್ನದ ವ್ಯಾಪಾರಿ ಬ್ಯಾಂಕ್ ನಿಂದ ಲೋನ್ ಪಡೆದಿದ್ದು ಇದಕ್ಕೆ ಆನ್ ಲೈನ್ ಮೂಲಕ ಬ್ಯಾಂಕ್ ಕಡೆಯಿಂದ ಇನ್ಸೂರೆನ್ಸ್ ಮಾಡಿಸಲು ಹೇಳಿದ್ದಾರೆ. ಈ ವೇಳೆ Max Life Insurance ಕಂಪನಿಯ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿದ್ದಾರೆ.  ಆ ನಂಬರ್ ಗೆ ಕರೆ ಸಿಗದಿದ್ದಾಗ ಮತ್ತೆ ಪ್ರಯತ್ನಿಸಿದ್ದಾರೆ.  ಈ ವೇಳೆ ನಂಬರ್ ಹ್ಯಾಕ್ ಆಗಿ ಬೇರೆ ಸಂಖ್ಯೆಗೆ ಬದಲಾವಣೆ ಆಗಿ ವಂಚಕರ ಗುಂಪಿಗೆ ಸಿಕ್ಕಿಬಿದ್ದಿದ್ದಾರೆ.  ಅವರು ಕರೆ ಸ್ವೀಕರಿಸಿ Any Desk App ಡೌನ್ಲೋಡ್ ಮಾಡಲು ಹೇಳಿದ್ದಾರೆ.

 ಅದರಂತೆ ಇನ್ಸೂರೆನ್ಸ್ ಆನ್ ಲೈನ್ ಮೂಲಕ ಮಾಡಲಾಗುವುದು ಎಂದಿದ್ದಾರೆ. ಆಗ ವಂಚರಕರು ಹೇಳಿದ ರೀತಿಯಲ್ಲಿ ಚಿನ್ನದ ವ್ಯಾಪಾರಿ ಮಾಡಿದ್ದಾರೆ. ನಂತರ ಚಿನ್ನದ ವ್ಯಾಪಾರಿಗೆ ಆನ್ ಲೈನ್ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ಸ್ನೇಹಿತ ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಕೂಡ ಸಹಾಯ ಮಾಡಿದ್ದಾರೆ. ಕೊನೆಗೆ ಚಿನ್ನದ ವ್ಯಾಪಾರಿಯ ಖಾತೆಯಿಂದ 1,56,298 ರೂಪಾಯಿ ಮತ್ತು ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಖಾತೆಯಿಂದ 68,828 ರೂಪಾಯಿ ಸೇರಿ ಒಟ್ಟು 2,25125 ರೂಪಾಯಿ ವಂಚಕರ ಪಾಲಾಗಿದೆ.ಈ ಬಗ್ಗೆ ಇಬ್ಬರು ಸ್ನೇಹಿತರು ದಕ್ಷಿಣ ಕನ್ನಡ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು. ವಂಚಕರಿಗಾಗಿ ಬಲೆ ಬೀಸಲಾಗಿದೆ.

- Advertisement -
spot_img

Latest News

error: Content is protected !!