Monday, June 8, 2026
Homeಕರಾವಳಿಕಾಸರಗೋಡುಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವು; ಬೈಕ್ ಸವಾರನ ಮೇಲೆ ಹರಿದ ಖಾಸಗಿ ಬಸ್

ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಸಾವು; ಬೈಕ್ ಸವಾರನ ಮೇಲೆ ಹರಿದ ಖಾಸಗಿ ಬಸ್

- Advertisement -
- Advertisement -

ಕಾಸರಗೋಡು: ಬೆಳ್ಳೂರು ಪಲ್ಲಪಾಡಿಯಲ್ಲಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು, ಸವಾರನ ಮೇಲೆ ಬಸ್ ಹರಿದು ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಮೃತರು ಮುಳ್ಳೇರಿಯದ ತಿಮ್ಮಪ್ಪ (60). ಗಾಯಗೊಂಡಿರುವ ಇನ್ನೋರ್ವ ಬೈಕ್ ಸವಾರ ಕಿನ್ನಿಂಗಾರ ಮೂಲದ ಗಿರೀಶ್ ಅವರನ್ನು ಮುಳ್ಳೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯು ಬೆಳ್ಳೂರು ಪಲ್ಲಪಾಡಿಯಲ್ಲಿ ನಡೆದಿದ್ದು, ಬೈಕ್‌ಗಳು ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ತಿಮ್ಮಪ್ಪ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಕಾಸರಗೋಡಿನಿಂದ ಕಿನ್ನಿಂಗಾರ್ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ತಿಮ್ಮಪ್ಪ ಅವರ ಮೇಲೆ ಹರಿದಿದೆ ಎನ್ನಲಾಗಿದೆ.

ಇನ್ನು ಗಂಭೀರವಾಗಿ ಗಾಯಗೊಂಡ ತಿಮ್ಮಪ್ಪ ಅವರನ್ನು ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಆದೂರು ಪೊಲೀಸರು ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!