- Advertisement -
![]()
- Advertisement -
ಉಡುಪಿ: ಎಚ್ಚರಿಕೆ ಕೊಟ್ರು ಕ್ಯಾರೆ ಎನ್ನದೇ ಸಮುದ್ರಕ್ಕಿದ 6 ವಿದ್ಯಾರ್ಥಿಗಳಲ್ಲಿ ಓರ್ವ ನೀರು ಪಾಲಾಗಿರುವ ಘಟನೆ ಮಟ್ಟು ಬೀಚ್ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್ ( 18) ಮೃತ ದುರ್ದೈವಿ. ಮಟ್ಟು ಬೀಚ್ ಬಳಿ ಸಮುದ್ರಕ್ಕಿಳಿದ ವಿದ್ಯಾರ್ಥಿಗಳಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಆದರೂ ವಿಧ್ಯಾರ್ಥಿಗಳು ಬೇರೆ ಕಡೆ ತೆರಳಿ ಮತ್ತೆ ಸಮುದ್ರಕ್ಕಿಳಿದಿದ್ದಾರೆ. ಈ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿದ್ದರು. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -


