Friday, June 5, 2026
Homeತಾಜಾ ಸುದ್ದಿಕ್ವೀನ್ ಎರಡನೇ ‌ಎಲಿಜಬೆತ್ ನಿಧನ ಹಿನ್ನೆಲೆ; ಇಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

ಕ್ವೀನ್ ಎರಡನೇ ‌ಎಲಿಜಬೆತ್ ನಿಧನ ಹಿನ್ನೆಲೆ; ಇಂದು ರಾಜ್ಯಾದ್ಯಂತ ಶೋಕಾಚರಣೆ ಘೋಷಣೆ

- Advertisement -
- Advertisement -

ಬೆಂಗಳೂರು: ಇಂಗ್ಲೆಂಡ್ ‌ರಾಣಿಯಾಗಿದ್ದ ಎರಡನೇ ಎಲಿಜಬೆತ್ ನಿಧನಕ್ಕೆ ಇಂದು ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಭಾರತ ಸರ್ಕಾರದ ಘೋಷಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡಾ ಇಂದು‌ ಒಂದು ದಿನದ ಶೋಕಾಚರಣೆ ಘೋಷಿಸಿ ಅಧಿಸೂಚನೆ ಹೊರಡಿಸಿದೆ.

ಹೀಗಾಗಿ‌ ಇಂದು ರಾಜ್ಯದಲ್ಲಿ ಯಾವುದೇ ಮನರಂಜನಾ‌ ಕಾರ್ಯಕ್ರಮಗಳು ಇರುವುದಿಲ್ಲ. ಪ್ರತಿ ದಿನ ರಾಷ್ಟ್ರಧ್ವಜ ಹಾರಿಸಲ್ಪಡುವ ಸರ್ಕಾರದ ಎಲ್ಲಾ‌ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ.

ಸೆಪ್ಟೆಂಬರ್ 8 ರಂದು ಕ್ವೀನ್ ‌ಎರಡನೇ ಎಲಿಜಬೆತ್ ಸ್ಕಾಟ್ಲೆಂಡ್ ನಲ್ಲಿ ನಿಧನ ಹೊಂದಿದ್ದರು.

- Advertisement -

Latest News

error: Content is protected !!