Saturday, June 13, 2026
Homeಕರಾವಳಿಮತ್ತೆ ಕರಾವಳಿಗೆ ಆಗಮಿಸಲಿದ್ದಾರೆ ನಮೋ; ಮೇ.3 ರಂದು ಪ್ರಧಾನಿ ಆಗಮಿಸುವ ಸಾಧ್ಯತೆ

ಮತ್ತೆ ಕರಾವಳಿಗೆ ಆಗಮಿಸಲಿದ್ದಾರೆ ನಮೋ; ಮೇ.3 ರಂದು ಪ್ರಧಾನಿ ಆಗಮಿಸುವ ಸಾಧ್ಯತೆ

- Advertisement -
- Advertisement -

ಮಂಗಳೂರು; ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಪಕ್ಷಗಳು ಭರ್ಜರಿಯಾಗಿ ಪ್ರಚಾರ ನಡೆಸುತ್ತಿವೆ, ಸ್ಟಾರ್ ಪ್ರಚಾರಕರ ಮೂಲಕ ಚುನಾವಣಾ ಕಣ ಇನ್ನಷ್ಟು ರಂಗೇರುತ್ತಿದೆ

ಕೇಂದ್ರ ನಾಯಕರ ದಂಡೇ ಸದ್ಯ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಹೀಗಿರುವಾಗ ಸಾಕಷ್ಟು ಕುತೂಹಲ ಕೆರಳಿಸಿರುವ ಕರಾವಳಿಗೆ ಪ್ರಚಾರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬರಲಿದ್ದಾರೆ ಎನ್ನಲಾಗಿದೆ.

ಮೇ 3 ರಂದು ನಡೆಯಲಿರುವ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಮೇ 6 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಸಮಾವೇಶ ಏರ್ಪಡಿಸುವ ಸ್ಥಳ ಇನ್ನೂ ನಿಗದಿ ಆಗಿಲ್ಲ. ಇವರಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಕೂಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ’ ಎಂದಿದ್ದಾರೆ.

- Advertisement -

Latest News

error: Content is protected !!