Monday, May 6, 2024
Homeಕರಾವಳಿಫೆ.19ರಂದು ವಿಎಚ್ ಪಿ ಯಿಂದ ಪೊಲೀಸ್ ಠಾಣೆಗಳ ಎದುರು ಶ್ರೀರಾಮ್ ಘೋಷಣೆಯೊಂದಿಗೆ ಪ್ರತಿಭಟನೆ

ಫೆ.19ರಂದು ವಿಎಚ್ ಪಿ ಯಿಂದ ಪೊಲೀಸ್ ಠಾಣೆಗಳ ಎದುರು ಶ್ರೀರಾಮ್ ಘೋಷಣೆಯೊಂದಿಗೆ ಪ್ರತಿಭಟನೆ

spot_img
- Advertisement -
- Advertisement -

ಮಂಗಳೂರು ದಕ್ಷಿಣ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್ ಪಂಪ್‌ವೆಲ್, ಇಬ್ಬರು ಶಾಸಕರು ಮತ್ತು ಮಹಾನಗರ ಪಾಲಿಕೆ ಇಬ್ಬರು ಸದಸ್ಯರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಫೆ.19ರಂದು ಮಂಗಳೂರು ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ಎದುರು ಜೈ ಶ್ರೀರಾಮ್ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಾನಂದ ಮೆಂಡನ್ ಸುದ್ದಿಗೋಷ್ಠಿಯಲ್ಲಿ ಹೇಳಿ‌ದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ, ‘ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಪ್ರಭಾ ಅವರು ಶ್ರೀರಾಮ ದೇವರಿಗೆ ಅಪಮಾನ ಮಾಡಿ, ನಾಗ ದೇವರು, ಗಣಪತಿ ದೇವರನ್ನು ಅವಮಾನಿಸಿ, ಹಿಂದೂಗಳಿಗೆ ಅಸ್ತಿತ್ವವಿಲ್ಲ ಎಂದು ಹಿಂದೂಗಳನ್ನು ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ದೂರು ಕೊಟ್ಟರೂ ಇಷ್ಟರವರೆಗೆ ಪ್ರಕರಣ ದಾಖಲಿಸಿಲ್ಲ. ಪ್ರಕರಣ ದಾಖಲಿಸಿದ್ದರೆ ಪ್ರತಿಭಟಿಸುವ ಅಗತ್ಯ ಬರುತ್ತಿರಲಿಲ್ಲ. ಆದರೆ ಈ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿ, ಶ್ರೀರಾಮ ಜೈಕಾರ ಕೂಗಿದ್ದಕ್ಕೆ ಪೊಲೀಸರು ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಪಾಲಿಕೆ ಸದಸ್ಯರಾದ ಸಂದೀಪ್‌ ಗರೋಡಿ ಮತ್ತು ಭರತ್ ಕುಮಾರ್ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿದ್ದು ಸರಿಯಲ್ಲ ಎಂದು ತಿಳಿಸಿದರು.

ಇನ್ನು ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿಯಾಗಿದ್ದು, ಈ ಸರ್ಕಾರಕ್ಕೆ ಮಣಿದ ಜಿಲ್ಲಾಡಳಿತ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದರೊಂದಿಗೆ ಶ್ರೀರಾಮ ದೇವರಿಗೆ ಅವಮಾನ ಮಾಡಿದೆ. ಶಿಕ್ಷಕಿ ಪ್ರಭಾ ಅವರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ನಮ್ಮ ನಾಯಕರ ಮೇಲೆ ಹಾಕಿರುವ ಪ್ರಕರಣ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ‘ಶಾಲೆಯ ಬಳಿ ಪ್ರತಿಭಟನೆ ನಡೆದ ವೇಳೆ ಶರಣ್ ಪಂಪ್‌ವೆಲ್, ಶಾಸಕ ಭರತ್ ಶೆಟ್ಟಿ ಶಾಲೆಯ ಬಳಿ ಇರಲೇ ಇಲ್ಲ. ಆದರೂ, ಅವರ ಮೇಲೆ ಪ್ರಕರಣ ದಾಖಲಿಸಿದ್ದು ಖಂಡನೀಯ. ತಾಕತ್ತಿದ್ದರೆ ನಮ್ಮ ನಾಯಕರನ್ನು ಬಂಧಿಸಲಿ. ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಏನೆಂದು ನಾವು ತೋರಿಸುತ್ತೇವೆ’ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಮುಖಂಡರಾದ ಭುಜಂಗ ಕುಲಾಲ್, ಮನೋಹರ್ ಸುವರ್ಣ, ಪ್ರದೀಪ್ ಸರಿಪಲ್ಲ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!