Saturday, June 29, 2024
Homeತಾಜಾ ಸುದ್ದಿಡಿಸೆಂಬರ್ 5 ರಂದು ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ಖಚಿತ- ವಾಟಾಳ್ ನಾಗರಾಜ್

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ಖಚಿತ- ವಾಟಾಳ್ ನಾಗರಾಜ್

spot_img
- Advertisement -
- Advertisement -

ಹಾಸನ: ಈಗಾಗಲೇ ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಬಂದ್ ಗೆ ಆಡಳಿತ ಪಕ್ಷ ಅಸಹಕಾರ ವ್ಯಕ್ತ ಪಡಿಸಿದ್ದು ಈ ಕುರಿತು ಮಾತನಾಡಿದ ವಾಟಾಳ್ ನಾಗರಾಜ್ ನೂರಕ್ಕೆ ನೂರರಷ್ಟು ಬಂದ್ ಮಾಡುವುದು ಖಚಿತ ಎಂದು ಹೇಳಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ ಡಿಸೆಂಬರ್ 5 ನೇ ತಾರೀಖು ಬೆಳಗ್ಗೆ 6 ಗಂಟೆ ಸಮಯದಿಂದ ಸಂಜೆ 5 ಗಂಟೆಯವರೆಗೆ ಬಂದ್ ನಡೆಯಲಿದೆ. ನಾವು ಜೈಲಿಗೆ ಹೋದರೂ ಜಾಮೀನು ಪಡೆಯುವುದಿಲ್ಲ. ಈಗಾಗಲೇ 144 ಸೆಕ್ಷೆನ್ ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದರು.ಅಲ್ಲದೆ ಡಿಸೆಂಬರ್ 5 ರ ಬಂದ್ ಬಿ.ಎಸ್. ಯಡಿಯೂರಪ್ಪ ಹಾಗೂ ಕನ್ನಡಿಗರ ನಡುವಿನ ಹೋರಾಟವಾಗಿದೆ ಎಂದು ಹೇಳಿದರು.

- Advertisement -
spot_img

Latest News

error: Content is protected !!