Thursday, June 4, 2026
Homeತಾಜಾ ಸುದ್ದಿದೇಶಕಂಡ ಖ್ಯಾತ ಉದ್ಯಮಿ "ಕಿಂಗ್ ಆಫ್ ಸ್ಪೈಸ್" ಧರ್ಮಪಾಲ್ ಗುಲಾಟಿ ಇನ್ನಿಲ್ಲ

ದೇಶಕಂಡ ಖ್ಯಾತ ಉದ್ಯಮಿ “ಕಿಂಗ್ ಆಫ್ ಸ್ಪೈಸ್” ಧರ್ಮಪಾಲ್ ಗುಲಾಟಿ ಇನ್ನಿಲ್ಲ

- Advertisement -
- Advertisement -

ದೆಹಲಿ: ದೇಶದ ಖ್ಯಾತ ಉದ್ಯಮಿ ಮಸಾಲ ಉತ್ಪನ್ನಗಳ ಮಾರಾಟ ಸಂಸ್ಥೆ ಎಂಡಿಎಚ್ ಮಸಾಲದ ಮಾಲೀಕ ಧರ್ಮಪಾಲ್ ಗುಲಾಟಿ(98 ) ಅವರು ಇಂದು ನಿಧನರಾಗಿದ್ದಾರೆ.ಎಂಡಿಎಚ್ ಮಸಾಲ ದೇಶದ ಎರಡನೇ ಅತಿದೊಡ್ಡ ಮಸಾಲ ಉತ್ಪನ್ನಗಳ ಮಾರಾಟ ಸಂಸ್ಥೆ ಯಾಗಿತ್ತು.

ಗುಲಾಟಿ ಅವರನ್ನು “ಕಿಂಗ್ ಆಫ್ ಸ್ಪೈಸ್” ಎಂದೇ ಕರೆಯಲಾಗುತ್ತಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಮಾತಾ ಚನ್ನನ್ ದೇವಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಹಾಶಯ್ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಎಂಡಿಎಚ್ ಮಾಲೀಕ ಧರ್ಮಪಾಲ್ ಅವರು ಎಂಡಿಎಚ್ ಮಸಾಲ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಜ್ಜ ಎಂದೇ ಗುರುತಿಸಲ್ಪಡುತ್ತಿದ್ದರು.

- Advertisement -

Latest News

error: Content is protected !!