Friday, May 17, 2024
Homeತಾಜಾ ಸುದ್ದಿರೂಪಾಂತರಿ ವೈರಸ್ 'ಒಮಿಕ್ರಾನ್' - ಕರ್ನಾಟಕದ ಇಬ್ಬರಲ್ಲಿ ಸೋಂಕು ಪತ್ತೆ

ರೂಪಾಂತರಿ ವೈರಸ್ ‘ಒಮಿಕ್ರಾನ್’ – ಕರ್ನಾಟಕದ ಇಬ್ಬರಲ್ಲಿ ಸೋಂಕು ಪತ್ತೆ

spot_img
- Advertisement -
- Advertisement -

ತೀವ್ರ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಹೊಸ ರೂಪಾಂತರಿ ವೈರಸ್ ‘ಒಮಿಕ್ರಾನ್’ ರಾಜ್ಯದಲ್ಲಿ ಇಬ್ಬರಲ್ಲಿ ಪತ್ತೆಯಾಗಿದೆ ಎಂಬ ಆಘಾತಕಾರಿ ವಿಷಯವನ್ನು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಈ ಮಾಹಿತಿ ನೀಡಿದ್ದು, ಭಾರತದಲ್ಲಿಯೇ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ ಎಂದರು.

66 ವರ್ಷದ ವೃದ್ಧ ಹಾಗೂ 46 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಕರ್ನಾಟಕದ ಮೂಲಕವೇ ಭಾರತಕ್ಕೆ ಒಮಿಕ್ರಾನ್ ಎಂಟ್ರಿಯಾಗಿದ್ದಾಗಿ ತಿಳಿಸಿದ್ದಾರೆ.

ಆಘಾತಕಾರಿ ಸಂಗತಿಯೆಂದರೆ ಈ ಹಿಂದೆ ಕರ್ನಾಟಕದಲ್ಲಿಯೇ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಲ್ಲದೇ ಕೊರೊನಾದ ಮೊದಲ ಸಾವು ಸಂಭವಿಸಿದ್ದು ಸಹ ಕರ್ನಾಟಕದಲ್ಲೇ ಎಂಬುದನ್ನು ಇಲ್ಲಿ ಸ್ಮರಿಸಬಹುದು.

- Advertisement -
spot_img

Latest News

error: Content is protected !!