Tuesday, May 14, 2024
Homeಕರಾವಳಿಮಂಗಳೂರು: ಬೇರೆ ಬೇರೆ ಹೆಸರಿನ ಮೂಲಕ ಜಿಲ್ಲೆಯ ಹಲವೆಡೆ ಕಳವು ಮಾಡುತ್ತಿದ್ದ ಖದೀಮನನ್ನು ಕೊನೆಗೂ ಬಂಧಿಸಿದ...

ಮಂಗಳೂರು: ಬೇರೆ ಬೇರೆ ಹೆಸರಿನ ಮೂಲಕ ಜಿಲ್ಲೆಯ ಹಲವೆಡೆ ಕಳವು ಮಾಡುತ್ತಿದ್ದ ಖದೀಮನನ್ನು ಕೊನೆಗೂ ಬಂಧಿಸಿದ ಬಜಪೆ ಪೊಲೀಸರು !

spot_img
- Advertisement -
- Advertisement -

ಮಂಗಳೂರು: 2020 ಮೇ ತಿಂಗಳಿನಲ್ಲಿ ಅಹಮ್ಮದ್ ಬಾವ ಎಂಬವರ ಅಡೂರು ಗ್ರಾಮದ , ಪಲ್ಲಂಗಡಿ ಎಂಬಲ್ಲಿರುವ ಮನೆಯ ಮುಂಭಾಗದ ಕಿಟಕಿಯ ಸರಳನ್ನು ಯಾರೋ ಕಳ್ಳರು ಮುರಿದು ಮನೆಯ ಒಳಗಡೆ ಹೋಗಿ ಕಬೋರ್ಡ್ ನಲ್ಲಿದ್ದ ಸುಮಾರು 5,00,000 / – ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಆರೋಪಿಯು ತನ್ನ ಹೆಸರು ಟಿ . ಅಬ್ಬಾಸ್, ಮಿಯಾಪದವು ಅಬ್ಬಾಸ್, ನಜೀರ್, ಇಬ್ರಾಹಿಂ ಎಂಬಂತೆ ಹೆಸರು ಬದಲಾಯಿಸಿಕೊಂಡು ಬೆಳ್ತಂಗಡಿ , ಕಡಬ , ರಾಮಕುಂಜ , ಪುತ್ತೂರು , ಉಳ್ಳಾಳ , ಕೇರಳ ರಾಜ್ಯದ ಕುಂಬ್ಳೆ , ಮಂಜೇಶ್ವರ ಮತ್ತು ಇತರ ಕಡೆಗಳಲ್ಲಿ ವಿಳಾಸವನ್ನು ಬದಲಾಯಿಸಿ ಸುಮಾರು ಒಂದು ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಸುತ್ತಾಡುತ್ತಿದ್ದ.

ಪ್ರಕರಣದ ಪ್ರಮುಖ ಆರೋಪಿ ಅಬ್ಬಾಸ್ ಎಂಬಾತನನ್ನು ಈ ಇಂದು ಬಂಧಿಸಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿ ಅಬ್ಬಾಸ್ ವಿರುದ್ಧ ಕೂಣಾಜೆ ಪೊಲೀಸ್ ಠಾಣೆ , ಉಳ್ಳಾಲ್ ಪೊಲೀಸ್ ಠಾಣೆ , ಬೆಳ್ತಂಗಡಿ ಅರಣ್ಯ ಘಟಕ , ಬೆಳ್ತಂಗಡಿ ಪೊಲೀಸ್ ಠಾಣೆ , ಕೇರಳ ರಾಜ್ಯದ ಕುಂಬ್ಳೆ ಪೊಲೀಸ್ ಠಾಣೆ , ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು , ಗ್ಯಾಸ್ ಸಿಲಿಂಡ್ ಕಳವು , ಬೈಕ್ ಕಳ್ಳತನ ಹಾಗೂ ಅಮೂಲ್ಯವಾದ ಬೀಟೆ ಮರ ಕಳ್ಳತನ ಸಂಬಂಧಿಸಿದಂತೆ ಒಟ್ಟು 20 ಕ್ಕು ಹೆಚ್ಚು ಕೇಸುಗಳು ದಾಖಲಾಗಿರುವುದು ತಿಳಿದು ಬಂದಿದೆ.

ಮಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಮಟ್ಟಹಾಕಲು ದೃಢನಿರ್ಧಾರ ಕೈಗೊಂಡಿರುವ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿ ಕುಮಾರ್ IPS ರವರ ಮಾರ್ಗದರ್ಶನದಂತೆ , ಶ್ರೀ ಹರಿರಾಮ್ ಶಂಕರ್ DCP ಮತ್ತು ಶ್ರೀ ದಿನೇಶ್ ಕುಮಾರ್ DCPರವರ ನಿರ್ದೇಶನದಂತೆ , ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಎನ್ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರು ಸಿಬ್ಬಂದಿಯವರಾದ PSI ಪೂವಪ್ಪ , ರಾಘವೇಂದ್ರ ನಾಯ್ಕ , ಶ್ರೀಮತಿ ಕಮಲ , ಪ್ರೊ PSI ಅರುಣ ಕುಮಾರ್ , ರಾಮ ಪೂಜಾರಿ ಮೇರೆಮಜಲು , ಸಂತೋಷ ಡಿ.ಕೆ ಸುಳ್ಯ , ರಶೀದ ಶೇಖ್ , ಸುಜನ್ , ಸಿದ್ದಲಿಂಗಯ್ಯ ಹಿರೇಮಠ , ಕಮಲಾಕ್ಷ , ರಾಜೇಶ್ , ಹೊನ್ನಪ್ಪ ಗೌಡ , ಎಫ್.ಬಿ.ಯು ವಿಭಾಗದ ಪ್ರಕಾಶ್ ಮತ್ತು ಸಿಬ್ಬಂದಿ ವರ್ಗ ಹಾಗೂ ಕಂಪ್ಯೂಟರ್ ವಿಭಾಗದ ಮನೋಜ್ ರವರು ಈ ಪತ್ತೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.

ಅಲ್ಲದೇ ಈತನು ವಿಚಾಣೆ ಸಮಯ ಗಂಜಿಮಠದಲ್ಲಿರುವ ಶ್ರೀಮತಿ ಜಸಿಂತಾರವರ ಡಿಕುನ್ನ ಕಾಂಪ್ಲೆಕ್ಸ್ ನಲ್ಲಿ ಮೊಬೈಲ್ ಕಳವಿಗು ಪ್ರಯತ್ನಿಸಿರುವ ಬಗ್ಗೆ ಬಾಯಿಬಿಟ್ಟಿರುತ್ತಾನೆ. ಕೊನೆಗೂ ಆರೋಪಿಯನ್ನು ಬಜಪೆ ಪೋಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!