Monday, June 30, 2025
Homeಮನರಂಜನೆಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಒಳ್ಳೆ ಹುಡ್ಗ ಪ್ರಥಮ್ ಏನ್ ಹೇಳಿದ್ದಾರೆ?

ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಒಳ್ಳೆ ಹುಡ್ಗ ಪ್ರಥಮ್ ಏನ್ ಹೇಳಿದ್ದಾರೆ?

spot_img
- Advertisement -
- Advertisement -

ಬೆಂಗಳೂರು : ನಿನ್ನೆಯಷ್ಟೇ ಭಾರತ ಸರ್ಕಾರ ಟೀಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್ ಗಲು ಬ್ಯಾನ್ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಇದು ಟಿಕ್ ಟಾಕ್ ಪ್ರಿಯರಿಗಂತೂ ಬೇಸರದ ಸಂಗತಿ. ಎಲ್ಲದಕ್ಕೂ ಟಿಕ್ ಟಾಕ್ ಅಂತಾ ಮುಗಿ ಬೀಳುತ್ತಿದ್ದ ಮಂದಿ ಇದೀಗ ಸಪ್ಪೆ ಮುಖ ಮಾಡಿಕೊಳ್ಳುವಂತಾಗಿದೆ. ಇನ್ನು ಸಾಕಷ್ಟು ಮಂದಿ ಸೆಲೆಬ್ರೆಟಿಗಳು ಕೂಡ ಈ ಆ್ಯಪ್ ನ್ನು ಬಳಕೆ ಮಾಡುತ್ತಿದ್ದರು.

ಇದೀಗ ಟಿಕ್ ಟಾಕ್ ಬ್ಯಾನ್ ಆಗಿರುವ ಬಗ್ಗೆ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡ್ಗ ಪ್ರಥಮ ಟ್ವೀಟ್ ಮಾಡಿದ್ದಾರೆ. “ಟಿಕ್ ಟಾಕ್ ಬ್ಯಾನ್ ಆಯ್ತು. ಇದೊಂಥರಾ ಡ್ರಗ್ಸ್ ಇದ್ದಂಗೆ, ತುಂಬಾ ಜನ ಡಿಪ್ರೆಶನ್ಗೆ ಹೋಗೋದು ಗ್ಯಾರಂಟಿ.  ಅದ್ರಲ್ಲೂ ಒಂದಷ್ಟು ಕಮಂಗಿಗಳು ಇದಾವೆ, ತಿಕ್ಲು ಥರಾ ಟಿಕ್ ಟಾಕ್ ಮಾಡ್ತಿದ್ವು,ಈಗ ಅವ್ರೇನ್ ಮಾಡ್ಕೊತಾರೋ ಗೊತಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಡಿಪ್ರೆಶನ್ ನಲ್ಲಿ ಇರೋ ಟಿಕ್ ಟಾಕ್ ಸ್ಟಾರ್ ಗಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಬದುಕಿಸುವಂತೆ ಪ್ರಾರ್ಥನೆ”, ಅಂತಾ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಟಿಕ್ ಟಾಕ್ ಬ್ಯಾನ್ ಆಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!