Friday, June 5, 2026
Homeಕರಾವಳಿಬೆಳ್ತಂಗಡಿ : ನೆರಿಯದಲ್ಲಿ ವೃದ್ಧ ಮನೆಯಲ್ಲಿ ಬಿದ್ದು ಸಾವು

ಬೆಳ್ತಂಗಡಿ : ನೆರಿಯದಲ್ಲಿ ವೃದ್ಧ ಮನೆಯಲ್ಲಿ ಬಿದ್ದು ಸಾವು

- Advertisement -
- Advertisement -

ಬೆಳ್ತಂಗಡಿ : ಕುಟುಂಬ ಕಲಹದಿಂದ ಮನೆಯಲ್ಲಿ ಒಬ್ಬರೆ ಇದ್ದಾಗ ಅನಾರೋಗ್ಯ ಸಮಸ್ಯೆಯಿಂದ ಕುಡಿದು ವೃದ್ಧರೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನೆರಿಯದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆ ಮನೆಯ ಗೋಪಾಲಕೃಷ್ಣ.ಟಿ.ಎನ್(60) ಮನೆಯಲ್ಲಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಕುಟುಂಬ ಕಲಹದಿಂದ ಗೋಪಾಲಕೃಷ್ಣ ಪತ್ನಿ ಮತ್ತು ಇಬ್ಬರು ಮಕ್ಕಳು ಬೇರೆ ಬೇರೆ ಕಡೆಯಲ್ಲಿ ಮನೆಮಾಡಿ ವಾಸವಾಗಿದ್ದು ಕಳೆದ ಒಂದು ವಾರದಿಂದ ಗೋಪಾಲಕೃಷ್ಣರಿಗೆ ಅನಾರೋಗ್ಯ ಸಮಸ್ಯೆ ಇದ್ದು ಇದರಿಂದ ಕುಡಿಯುತ್ತಿದ್ದರು ಇದರಿಂದ ಮನೆಯಲ್ಲಿ ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಜ.9 ರಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಯಾವುದೇ ಬೇರೆ ಅನುಮಾನ ಇಲ್ಲ ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!