Friday, June 5, 2026
Homeಕರಾವಳಿಉಡುಪಿಕಾಪು: ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ: ಆರೋಪಿಗಳಿಬ್ಬರು ಪರಾರಿ

ಕಾಪು: ಅಕ್ರಮ ಕಸಾಯಿ ಖಾನೆ ಮೇಲೆ ದಾಳಿ: ಆರೋಪಿಗಳಿಬ್ಬರು ಪರಾರಿ

- Advertisement -
- Advertisement -

ಕಾಪು: ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿ ನಡೆದಿದೆ. ಇಲ್ಲಿನ ಫ್ಯಾಕ್ಟರಿಯ ಹಿಂಭಾಗದ ಹಾಡಿಯಲ್ಲಿ ಇಬ್ಬರು ವ್ಯಕ್ತಿಗಳು ದನದ ಮಾಂಸ ಕಟಾವು ಮಾಡ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆದ್ರೆ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.

ಕಾಪುವಿನ ಭಾರತ್‌ ನಗರದ ನಿವಾಸಿ ಮೊಹಮ್ಮದ್‌ ಆರೀಫ್‌ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಇನ್ನೂರು ಕೆ.ಜಿ.ಯಷ್ಟು ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!