Sunday, May 19, 2024
Homeತಾಜಾ ಸುದ್ದಿಸತ್ತ ಮೀನಿನಿಂದಾಗಿ ರಾತ್ರೋರಾತ್ರಿ ಲಕ್ಷಾಧಿಪತಿಯಾದ ಅಜ್ಜಿ

ಸತ್ತ ಮೀನಿನಿಂದಾಗಿ ರಾತ್ರೋರಾತ್ರಿ ಲಕ್ಷಾಧಿಪತಿಯಾದ ಅಜ್ಜಿ

spot_img
- Advertisement -
- Advertisement -

ಕೋಲ್ಕತ್ತಾ : ಅದೃಷ್ಟ ಅನ್ನೋದು ಯಾರಿಗೆ ಯಾವ ರೂಪದಲ್ಲಿ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಅದೃಷ್ಟ ಚೆನ್ನಾಗಿದ್ದರೆ ರಾತ್ರಿ ಹಗಲಾಗುವಷ್ಟರಲ್ಲಿ ಯಾರು ಬೇಕಾದರೂ ಕೋಟ್ಯಾಧಿಪತಿಗಳಾಗಬಹುದು. ಇಂತಹದ್ದೇ ಅಪರೂಪದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಹೌದು… ನದಿಯಲ್ಲಿ ಬರೋಬ್ಬರಿ 52 ಕೆಜಿ ತೂಕದ ಸತ್ತ ಮೀನು ಸಿಕ್ಕಿದ ಬಳಿಕ ಅಜ್ಜಿಯೊಬ್ಬರು ರಾತ್ರೋರಾತ್ರಿ ಶ್ರೀಮಂತೆಯಾಗಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರದೇಶದ ಸಾಗರ್ ದ್ವೀಪದ ಗ್ರಾಮದ ನಿವಾಸಿ ಪುಷ್ಪಾ ಕಾರ್ ಗೆ ಭಾರೀ ತೂಕದ ಸತ್ತ ಮೀನೊಂದು ಸಿಕ್ಕಿದೆ. ಆ ಮೀನನ್ನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಮೀನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಒಂದೇ ಮೀನನ್ನು 3 ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪುಷ್ಪಾ ಕಾರ್ ಮೀನುಗಾರಿಕೆಗೆ ಹೋಗುವಾಗ ಆಕಸ್ಮಿಕವಾಗಿ ನದಿಯಿಂದ ದೊಡ್ಡ ಮೀನು ತೇಲಿ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಪುಷ್ಪಾ ಕಾರ್ ನದಿಗೆ ಹಾರಿದ್ದು, ಮೀನನ್ನು ನದಿಯ ತೀರಕ್ಕೆ ಎಳೆದುಕೊಂಡು ಬಂದಿದ್ದಾರೆ. ಅಜ್ಜಿಗೆ ಮೀನನ್ನು ತೀರಕ್ಕೆ ತರಲು ಸ್ವಲ್ಪ ಸಮಯ ಮತ್ತು ಶ್ರಮ ಬೇಕಾಯಿತು. ನಂತರ ಆ ಮೀನನ್ನು ಭೋಲಾ ಮೀನು ಎಂದು ಗುರುತಿಸಲಾಗಿದೆ. ಬಳಿಕ ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸ್ಥಳೀಯರು ಸಹಾಯ ಮಾಡಿದ್ದರು.

“ಮೀನು ನನಗೆ ಜಾಕ್‍ಪಾಟ್ ಆಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಅಜ್ಜಿ ಹೇಳಿದ್ದಾರೆ.

ಮೀನು ಕೊಳೆಯಲು ಪ್ರಾರಂಭಿಸಿದ್ದರಿಂದ ತಿನ್ನಲೂ ಸಾಧ್ಯವಿಲ್ಲ. ಜೊತೆಗೆ ಈ ಗಾತ್ರದ ಮೀನುಗಳ ಮಾಂಸವು ರಬ್ಬರ್ ಆಗಿರುವುದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಬ್ಲಬ್ಬರ್ ಎಂದು ಕರೆಯಲ್ಪಡುವ ಮೀನಿನ ಕೊಬ್ಬನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್ ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಈ ಮೀನುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಿಕೊಳ್ಳಲಾಗುತ್ತದೆ.

- Advertisement -
spot_img

Latest News

error: Content is protected !!