Wednesday, August 19, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಗುರುವಾಯನಕೆರೆ ಬಸ್ ನಿಲ್ದಾಣದ ಬಳಿ ವೃದ್ಧರೊಬ್ಬರ ಮೃತದೇಹ ಪತ್ತೆ

ಬೆಳ್ತಂಗಡಿ :ಗುರುವಾಯನಕೆರೆ ಬಸ್ ನಿಲ್ದಾಣದ ಬಳಿ ವೃದ್ಧರೊಬ್ಬರ ಮೃತದೇಹ ಪತ್ತೆ

- Advertisement -
- Advertisement -

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಗುರುವಾಯನಕೆರೆ ಬಸ್ ನಿಲ್ದಾಣದ ಬಳಿಯ ಭೂಷಣ್ ಬಾರ್ ಎದುರುಗಡೆ ವೃದ್ಧರೊಬ್ಬರ ಮೃತದೇಹ ಆ.18 ರಂದು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚಾಳ ನಿವಾಸಿ ಮರಿಯಪ್ಪ (70ವ) ಎಂದು ಪೊಲೀಸ್ ತನಿಖೆಯಿಂದ ಗುರುತಿಸಲಾಗಿದೆ. ಈ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ನಿಲ್ದಾಣದ ಸಮೀಪ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮೂಡಿಸಿತ್ತು.

- Advertisement -

Latest News

error: Content is protected !!