Thursday, June 4, 2026
Homeಕರಾವಳಿಉಳ್ಳಾಲ:ಚಿಟ್ ಫಂಡ್ ವ್ಯವಹಾರದಲ್ಲಿ ಮೋಸ ಹೋದ್ದರಿಂದ ನೊಂದು, ವೃದ್ಧ ಆತ್ಮಹತ್ಯೆ

ಉಳ್ಳಾಲ:ಚಿಟ್ ಫಂಡ್ ವ್ಯವಹಾರದಲ್ಲಿ ಮೋಸ ಹೋದ್ದರಿಂದ ನೊಂದು, ವೃದ್ಧ ಆತ್ಮಹತ್ಯೆ

- Advertisement -
- Advertisement -

ಉಳ್ಳಾಲ: ಚಿಟ್ ಫಂಡ್ ವ್ಯವಹಾರದಲ್ಲಿ ಮೋಸ ಹೋದ್ದರಿಂದ ನೊಂದು ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಉಳ್ಳಾಲದ ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆಯ ಬಳಿಯ ನಡೆದಿದೆ. ಜಯರಾಮ ಶೆಟ್ಟಿ(71) ಮೃತ ದುರ್ದೈವಿ.


ಜಯರಾಮ್ ಶೆಟ್ಟಿ ಅವರು ಮಾಡೂರು ಬಸ್ಸು ತಂಗುದಾಣದ ಬಳಿಯ ಪಂಚಾಯತ್ ಕಟ್ಟಡದ ಅಂಗಡಿಯಲ್ಲಿ ಎಳೆನೀರು ವ್ಯಾಪಾರಿಯಾಗಿದ್ದು, ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರೆನ್ನಲಾಗಿದೆ. ಇಬ್ಬರು ಫಂಡ್ ಹಣ ಮರಳಿಸದೆ ಮೋಸ ಮಾಡಿದ್ದರಿಂದ, ಜಯರಾಮ್ ಶೆಟ್ಟಿ ತೀರಾ ನಷ್ಟ ಅನುಭವಿಸಿದ್ದು, ಇದೇ ಚಿಂತೆಯಲ್ಲೇ ಅವರು ನೇಣು ಬಿಗಿದು ಆತ್ಮ ಹತ್ಯೆಗೈದಿರುವುದಾಗಿ ಅವರ ಪತ್ನಿ ಕೋಟೆಕಾರ್ ಗ್ರಾಪಂ ಮಾಜಿ ಸದಸ್ಯೆ ಲೀನಾ ಪೊಲೀಸರಿಗೆ ದೂರು ನೀಡಿದ್ದಾರೆ.

ಇಂದು ಬೆಳಗ್ಗೆ ಮನೆಯ ಕೋಣೆಯೊಳಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!