Friday, June 5, 2026
Homeಕರಾವಳಿಮಂಗಳೂರು: ಸ್ಕೂಟರ್‌ಗೆ ಕಾರು ಢಿಕ್ಕಿ; ವೃದ್ಧ ದಂಪತಿಗೆ ಗಾಯ

ಮಂಗಳೂರು: ಸ್ಕೂಟರ್‌ಗೆ ಕಾರು ಢಿಕ್ಕಿ; ವೃದ್ಧ ದಂಪತಿಗೆ ಗಾಯ

- Advertisement -
- Advertisement -

ಮಂಗಳೂರು: ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ವೃದ್ಧ ದಂಪತಿ ಗಾಯಗೊಂಡಿರುವ ಘಟನೆ  ಕೆಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕದ್ರಿ ಕಂಬಳ ನಿವಾಸಿಗಳಾದ ಸೂರ್ಯನಾರಾಯಣ ರಾವ್‌ (65) ಹಾಗೂ ಅವರ ಪತ್ನಿ ಸವಿತಾ (61) ಗಾಯಗೊಂಡವರು.

ಸ್ಕೂಟರ್‌ನಲ್ಲಿ ಕದ್ರಿ ಕೆಪಿಟಿ ವೃತ್ತದಿಂದ ಮುಂದೆ ಬಂದು ಹೆದ್ದಾರಿಯಲ್ಲಿ ಎಸ್‌ಕೆಎಸ್‌ ಪ್ಲಾನೆಟ್‌ ಅಪಾರ್ಟ್‌ಮೆಂಟ್‌ ಎದುರಿನಲ್ಲಿ ಯು ಟರ್ನ್ ಮಾಡುತ್ತಿದ್ದ ಸಂದರ್ಭ ಕುಂಟಿಕಾನ ಕಡೆಯಿಂದ ವೇಗವಾಗಿ ಬಂದ ಕಾರು ಸ್ಕೂಟರಿಗೆ ಹಿಂದಿನಿಂದ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ದಂಪತಿಗಳಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಲ್ಲಿ ಸೂರ್ಯನಾರಾಯಣ ರಾವ್‌ ಅವರ ತಲೆಗೆ ಗಂಭಿರ ಏಟು ಬಿದ್ದಿದ್ದು, ಅವರ ಪತ್ನಿ ಕೈ ಕಾಲುಗಳಿಗೆ ಗಾಯವಾಗಿದೆ. ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!