Thursday, June 4, 2026
Homeತಾಜಾ ಸುದ್ದಿ30 ಕೋಟಿ ಆಸ್ತಿಯಿದ್ದರೂ ಹೆತ್ತವರನ್ನು ನೋಡಿಕೊಳ್ಳದ ಮಗ ; ನೊಂದು ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ

30 ಕೋಟಿ ಆಸ್ತಿಯಿದ್ದರೂ ಹೆತ್ತವರನ್ನು ನೋಡಿಕೊಳ್ಳದ ಮಗ ; ನೊಂದು ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ

- Advertisement -
- Advertisement -

ರಿಯಾಣ: 30 ಕೋಟಿ ಆಸ್ತಿಯಿದ್ದರೂ ಹೆತ್ತವರನ್ನು ಮಗ ನೋಡಿಕೊಳ್ಳದ ಕಾರಣ ನೊಂದು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದಲ್ಲಿ ನಡೆದಿದೆ. ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ಮೃತ ದಂಪತಿ.

ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ಅವರು ಚಾರ್ಖಿ ದಾದ್ರಿಯ ಬದ್ರಾದ ಶಿವ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 30 ಕೋಟಿ ಆಸ್ತಿ ಹೊಂದಿದ್ದ ವೃದ್ಧ ದಂಪತಿ ತಮ್ಮ ಮಗ ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ನೊಂದು ಆತ್ಮಹತ್ಯೆಗೆ ಶರಣಾದಿದ್ದಾರೆ.

ವಿಷ ಸೇವಿಸುವ ಮುನ್ನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವೃದ್ಧ ದಂಪತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದಂಪತಿ ತಮ್ಮ ಇನ್ನೊಬ್ಬ ಮಗ ಮಹೇಂದರ್‌ನೊಂದಿಗೆ ಬಾಧ್ರಾದಲ್ಲಿ ವಾಸಿಸುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ನಿಧನರಾಗಿದ್ದರು. ಮಗನ ನಿಧನದ ಬಳಿಕ ತಮ್ಮ ಸೊಸೆ ನೀಲಂ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಸೊಸೆ ಇವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದರು.  30 ಕೋಟಿ ರೂ. ಆಸ್ತಿ ಇರುವ ಇನ್ನೊಬ್ಬ ಮಗ ಊಟವನ್ನೂ ಹಾಕುತ್ತಿರಲಿಲ್ಲ. ಇದರಿಂದ ನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

Latest News

error: Content is protected !!