ಮಂಗಳೂರು: ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನಾಂಕ 09-06-2025 ರಂದು ರಾತ್ರಿ ಸುಮಾರು 8-00 ಗಂಟೆಗೆ ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ರವರು ಮತ್ತು ಅವರ ಇಬ್ಬರು ಸಹಚರರೊಂದಿಗೆ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯದ ಕುರಿತು ಎನ್.ಎಂ.ಪಿ.ಎ ಕಛೇರಿಯ ಡೆಪ್ಯೂಟಿ ಚೇರ್ಪರ್ಸನ್ ರವರ ಕಛೇರಿಗೆ ನುಗ್ಗಿ 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೇ, ಅವರನ್ನು ತಡೆದು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಅವರು ಹೊರಗೆ ಬಂದಾಗಲೂ ಹಿಂಬಾಲಿಸುತ್ತಾ ಬೆದರಿಕೆ ಹಾಕಿ ಕಿರುಚುತ್ತಾ ಬಂದಿದ್ದು, ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೋಗುತ್ತಿರುವಾಗ ಕಾರನ್ನು ಸಹ ತಡೆದು ನಿಲ್ಲಿಸಿ, ವಾದ-ವಿವಾದ ಮಾಡಿರುವ ಬಗ್ಗೆ Secretary, NMPA, Panambur, Mangaluru ರವರು ದಿನಾಂಕ 10-06-2025 ರಂದು ಸಂಜೆ ದೂರು ನೀಡಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025 ಕಲಂ 224,221,132, 126, 127, 226 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುದ್ದು, ತನಿಖೆ ನಡೆಯುತ್ತಿದೆ.


