
ಕಾಸರಗೋಡು; ನಮ್ಮ ಆಯಸ್ಸು ಮುಗಿದಿದ್ರೆ ಸಾವು ಹೇಗಾದ್ರೂ ಬರುತ್ತೆ ಅಂದರಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯಾನೇ ಇಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ಕಾಸರಗೋಡಿನ ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್‌ನ ನಿವಾಸಿ ವನಜಾ ಅವರ ಪುತ್ರಿ , ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಮಹಿಮಾ ಕೆ.ಸಿ (19) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ನೋಡಿದ ಆಕೆಯ ಅಣ್ಣ ಮಹೇಶ್ ಆಕೆಯನ್ನು ಇಳಿಸಿ ಸಂಬಂಧಿಕರ ಕಾರಿನಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿನಿಯ ಜೀವ ಉಳಿಸಲು ಕಾರನ್ನು ವೇಗವಾಗಿ ಓಡಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿ ಪಲ್ಟಿ ಹೊಡೆದಿದೆ.ಈ ವೇಳೆ ಮಹಿಮಾ, ಆಕೆಯ ಅಣ್ಣ ಮತ್ತು ತಾಯಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಹಿಮಾ ಸಾವನಪ್ಪಿದ್ದಾರೆ. ಮಹಿಮಾ ಅಣ್ಣ ಮತ್ತು ಮಹಿಮಾ ತಾಯಿ ಸಣ್ಣಪುಟ್ಟಗಾಯಳಿಂದ ಪಾರಾಗಿದ್ದಾರೆ. ಮಹಿಮಾ ಅಪಘಾತದಿಂದ ಸಾವನಪ್ಪಿದ್ದಾರೋ ಅಥವಾ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ್ದಾರೋ ಎನ್ನುವುದು ಪೋಸ್ಟ್ ಮಾರ್ಟಂ ಮೂಲಕ ತಿಳಿದು ಬರಬೇಕಿದೆ.
ಮಹಿಮಾ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದೆ ಎಂದು ವರದಿಯಾಗಿದೆ.


