Saturday, June 29, 2024
Homeತಾಜಾ ಸುದ್ದಿಸ್ಥಳ ಮಹಜರು ವೇಳೆ ಪವಿತ್ರ ಗೌಡಗೆ ಲಿಫ್ ಸ್ಟಿಕ್ ನೀಡಿದ ಮಹಿಳಾ ಪಿಎಸ್ ಐಗೆ ನೋಟಿಸ್

ಸ್ಥಳ ಮಹಜರು ವೇಳೆ ಪವಿತ್ರ ಗೌಡಗೆ ಲಿಫ್ ಸ್ಟಿಕ್ ನೀಡಿದ ಮಹಿಳಾ ಪಿಎಸ್ ಐಗೆ ನೋಟಿಸ್

spot_img
- Advertisement -
- Advertisement -

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಪವಿತ್ರ ಗೌಡ ಕಂಬಿ ಎಣಿಸುತ್ತಿದ್ದಾರೆ. ಮೊನ್ನೆ ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ಪವಿತ್ರಾ ಗೌಡಳನ್ನು ಸ್ಥಳ ಮಹಜರಿಗಾಗಿ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಾಪಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಪವಿತ್ರ ಲಿಪ್ ಸ್ಟಿಕ್ ಹಾಕ್ಕೊಂಡು ಹೊರಗೆ ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಅಲ್ಲದೇ ಯಾರು ಕೊಟ್ರು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಇದೀಗ ಸ್ಥಳ ಮಹಜರು ವೇಳೆ ಆರೋಪಿ ಪವಿತ್ರಾಗೆ ಲಿಪ್ ಸ್ಟಿಕ್ ನೀಡಿದ್ದ ವಿಜಯನಗರ ಮಹಿಳಾ ಪಿಎಸ್ ಐಗೆ ನೋಟಿಸ್ ನೀಡಲಾಗಿದೆ.

ಜೂನ್ 15ರಂದು ಆರೋಪಿ ಪವಿತ್ರಾ ಗೌಡಳನ್ನು ಆರ್.ಆರ್.ನಗರದ ಮನೆಗೆ ಸ್ಥಳ ಮಹಜರಿಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಲಿಪ್ ಸ್ಟಿಕ್ ಹಚ್ಚಿಕೊಂಡು, ಮೇಕಪ್ ಮಾಡಿಕೊಂಡು ಹೊರ ಬಂದಿದ್ದರು. ಪವಿತ್ರಾಗೌಡಗೆ ಲಿಪ್ ಸ್ಟಿಕ್ ನೀಡಿದ್ದ ವಿಜಯನಗರ ಠಾಣೆ ಮಹಿಳಾ ಪಿಎಸ್ ಐಗೆ ಇದೀಗ ಕರ್ತವ್ಯ ಲೋಪ ಆರೋಪದಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!