ಬೆಳ್ತಂಗಡಿ : ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಕಟ್ಟಡದ ಕೆಲಸಗಳನ್ನು ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಸಹಿತ ಕುವೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳು ಗುರುವಾಯನಕೆರೆಯಲ್ಲಿರುವ ವಿದ್ವತ್ ಪಿಯು ಕಾಲೇಜಿಗೆ ತೆರಳಿ ಪರಿಶೀಲನೆ ಮಾಡಿದಾಗ ಒಂದೊಂದೆ ಅಕ್ರಮಗಳು ಬೆಳಕಿಗೆ ಬಂದಿದೆ. ಇನ್ನೂ ಕೆಲಸ ಮಾಡದಂತೆ ಬಿಸಿ ಮುಟ್ಟಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಆದ್ರೆ ಬೇರೆ ಕಾಲೇಜಿನ ಕಟ್ಟಡಗಳ ಕಾಮಗಾರಿಗೆ ಪೊಲೀಸರನ್ನು ಕರೆದುಕೊಂಡು ಹೋಗಿ ಟೇಪ್ ಎಳೆದು ಕಾನೂನು ಕ್ರಮದ ಬ್ಯಾನರ್ ಹಾಕಿದಂತೆ ಈ ಕಾಲೇಜಿಗೂ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲವೇ?.
ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜ್ ಮತ್ತು ಕಾಶಿಬೆಟ್ಟು ಬಳಿಯಿರುವ ಅಭ್ಯಾಸ್ ಫ್ರಿ ಯುನಿವರ್ಸಿಟಿ ಕಾಲೇಜ್ ನ ಅಕ್ರಮಗಳ ಬಗ್ಗೆ ಸಮಗ್ರ ಸರಣೆ ವರದಿಗಳನ್ನು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಈ ಹಿಂದೆ ಪ್ರಕಟ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಅಭ್ಯಾಸ್ ಪಿಯು ಕಾಲೇಜ್ ಗೆ ಕೂಡ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಲಾಯಿಲ ಗ್ರಾಮ ಪಂಚಾಯತ್ ಪಿಡಿಓ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ರೂ.ಇದೀಗ ವಿದ್ವತ್ ಪಿಯು ಕಾಲೇಜ್ ಗೂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸ.ನಂ.130/2 ರಲ್ಲಿ 0.85 ಎಕ್ರೆ ವಿಸ್ತೀರ್ಣ ಪ್ರದೇಶದಲ್ಲಿ ಅನಧಿಕೃತವಾಗಿ ನಾಲ್ಕನೇ ಮಹಡಿಯ ಕಟ್ಟಡ ನಿರ್ಮಾಣಕ್ಕಾಗಿ ಕಾಮಗಾರಿ ಪ್ರಾರಂಭಿಸಿದ್ದು ಹಾಗೂ ಸಾಮಾಗ್ರಿಗಳ ಸಂಗ್ರಹಣೆ ಮಾಡಿರುವುದು ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ,ಕುವೆಟ್ಟು ಗ್ರಾಮ ಪಂಚಾಯತ್ ಅಧಿಕಾರಿಗಳ ಭೇಟಿ ವೇಳೆ ಕಂಡು ಬಂದಿದೆ. ಈ ಕಾಮಗಾರಿ ನಡೆಸಲು ಯಾವುದೇ ಕುವೆಟ್ಟು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿಲ್ಲ ಹಾಗೂ ಅನುಮತಿಯನ್ನು ಗ್ರಾಮ ಪಂಚಾಯತ್ ನೀಡಿಲ್ಲ. ಈ ಅನಧಿಕೃತ ಕಟ್ಟಡಗಳ ಕೆಲಸಗಳನ್ನು ಕೂಡಲೇ ನಿಲ್ಲಿಸುವಂತೆ ಇದನ್ನು ತಪ್ಪಿ ಕೆಲಸಗಳನ್ನು ಮುಂದುವರಿಸಿದ್ರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ವತ್ ಎಜುಕೇಶನ್ ಫೌಂಡೇಶನ್ ಕಾಲೇಜಿನ ಅಧ್ಯಕ್ಷರಾದ ಸುಭಾಶ್ವಂದ್ರ ಶೆಟ್ಟಿಗೆ ಜ.6 ರಂದು ತಿಳುವಳಿಕೆ-1 ನೋಟಿಸ್ ಜಾರಿ ಮಾಡಿದ್ದಾರೆ.
ಪೊಲೀಸರ ಜೊತೆ ಹೋಗಿ ಟೇಪ್ ಹಾಕಲು ಭಯವೇ?: ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಮತ್ತು ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಜೊತೆಯಾಗಿ ಗುರುವಾಯನಕೆರೆಯ ಇನಿಫೀನಿಟಿ ಲರ್ನಿಂಗ್ ಫೌಂಡೇಶನ್ ಕಾಲೇಜಿನ ಕಟ್ಟಡಗಳ ಕೆಲಸ ಮಾಡುತ್ತಿದ್ದಾಗ ಪೊಲೀಸರನ್ನು ಕರೆದುಕೊಂಡು ಹೋಗಿ ಡಿ.27 ರಂದು ಟೇಪ್ ಎಳೆದು ಕೆಲಸ ನಿಲ್ಲಿಸಿದ ಬಗ್ಗೆ ಕಾನೂನು ಕ್ರಮದ ಬ್ಯಾನರ್ ಹಾಕಲು ಆಗುತ್ತೆ. ವಿದ್ವತ್ ಪಿಯು ಕಾಲೇಜಿನಲ್ಲಿ ಅಕ್ರಮ ಕಟ್ಟಡಗಳ ಕೆಲಸ ಮಾಡುತ್ತಿರುವ ಬಗ್ಗೆ ಟೇಪ್ ಎಳೆದು ಬ್ಯಾನರ್ ಹಾಕಿದ ಅಧಿಕಾರಿಗಳೇ ಹೋಗಿ ನೋಡಿದಾಗ ಅಕ್ರಮಗಳು ಬೆಳಕಿಗೆ ಬಂದಾಗ ಅದಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿ ಟೇಪ್ ಎಳೆದು ಕಾನೂನು ಕ್ರಮದ ಬ್ಯಾನರ್ ಹಾಕಲು ಯಾಕೆ ಭಯಪಡುತ್ತಿರಾ?. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿರುವುದು ಯಾಕೆ?. ಕಾನೂನು ಅಂದ್ರೆ ಎಲ್ಲರಿಗೂ ಒಂದೇ ಅಂತಾ ಅರ್ಥ ಮಾಡಿಕೊಂಡು ಕಾನೂನು ಕೆಲಸವನ್ನು ಸರಿಯಾಗಿ ಪಾಲಿಸುವುದು ಉತ್ತಮ.


