Tuesday, June 6, 2023
Homeಇತರಉತ್ತರ ಕೊರಿಯಾ ಸರ್ವಾಧಿಕಾರಿಯ ಸಾವಿನ ಸುದ್ದಿ​ ಘೋಷಣೆಯೊಂದೇ ಬಾಕಿ ಎನ್ನುತ್ತಿವೆ ವರದಿಗಳು

ಉತ್ತರ ಕೊರಿಯಾ ಸರ್ವಾಧಿಕಾರಿಯ ಸಾವಿನ ಸುದ್ದಿ​ ಘೋಷಣೆಯೊಂದೇ ಬಾಕಿ ಎನ್ನುತ್ತಿವೆ ವರದಿಗಳು

- Advertisement -
- Advertisement -

ವಾಷಿಂಗ್ಟನ್: ಹೃದಯ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂಬ ಗುಮಾನಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸರ್ವಾಧಿಕಾರಿ ಮೃತಪಟ್ಟ ನಂತರ ನಡೆಯುವ ಅಂತ್ಯಕ್ರಿಯೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗಬಹುದು ಎಂದು ಪ್ಯೊಂಗ್ಯಾಂಗ್ ನ ನಿವಾಸಿಗಳೆಲ್ಲ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ.
ಬಹುತೇಕ ಮಾಲ್​ಗಳಲ್ಲಿ ಜನರು ತುಂಬಿದ್ದಾರೆ. ನಿತ್ಯ ಬಳಕೆಯ ವಸ್ತುಗಳೊಂದಿಗೆ, ಮದ್ಯ, ವಿದ್ಯುತ್​ ಉಪಕರಣಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಕಿಮ್ ಜಾಂಗ್​ ಉನ್​ ಸಾವಿನ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತವೆ. ಈ ವೇಳೆ ವಿದ್ಯುತ್ ಪೂರೈಕೆಯಲ್ಲಿ ಕಡಿತ ಆಗಬಹುದು. ಹಾಗೇ ಬೇಕಾದ ವಸ್ತುಗಳೂ ಸಿಗದೆ ಇರಬಹುದು ಎಂಬ ಆತಂಕದಲ್ಲಿದ್ದಾರೆ ಅಲ್ಲಿನ ಜನ.

ಅಷ್ಟೇ ಅಲ್ಲದೆ, ಅಲ್ಲಿ ಹೆಲಿಕಾಪ್ಟರ್​ಗಳೆಲ್ಲ ಕೆಳಗೆ ಹಾರಾಡುತ್ತಿವೆ. ಉತ್ತರ ಕೊರಿಯಾದಿಂದ ಉತ್ತರ ಚೀನಾಕ್ಕೆ ಸಂಚರಿಸುವ ರೈಲು ಕೂಡ ತಾತ್ಕಾಲಿಕವಾಗಿ ಬಂದ್​ ಆಗಿದೆ. ಕಿಮ್​ ಜಾಂಗ್​ ಉನ್​ ಅವರು ಏಪ್ರಿಲ್​ 11ರಿಂದಲೂ ದೇಶದಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ. ಅವರ ಖಾಸಗಿ ರೈಲು ಅವರದ್ದೇ ಮಾಲೀಕತ್ವದ ರೈಲು ನಿಲ್ದಾಣದ ವೊನ್ಸನ್ ಕಾಂಪೌಂಡ್​ ಬಳಿ ಕಳೆದ ಮಂಗಳವಾರದಿಂದಲೂ ನಿಂತಿದೆ ಎನ್ನಲಾಗಿದೆ. ಅದರ ಸ್ಯಾಟಲೈಟ್​ ಚಿತ್ರವೊಂದನ್ನು ಬಿಡುಗಡೆ ಮಾಡಲಾಗಿದೆ.

- Advertisement -

Latest News

error: Content is protected !!