Friday, August 28, 2026
Homeಕರಾವಳಿಬೆಳ್ತಂಗಡಿ: ನಗರದ ಸೋಮಾವತಿ ನದಿಯಲ್ಲಿ ನೀರಿನ ಕೊರತೆಯಿಂದ ಮೀನುಗಳು ಸಾವು:ಬೆಳ್ತಂಗಡಿ ನಗರಕ್ಕೆ ಇಂದಿನಿಂದ ನೀರು ಪೂರೈಕೆ...

ಬೆಳ್ತಂಗಡಿ: ನಗರದ ಸೋಮಾವತಿ ನದಿಯಲ್ಲಿ ನೀರಿನ ಕೊರತೆಯಿಂದ ಮೀನುಗಳು ಸಾವು:ಬೆಳ್ತಂಗಡಿ ನಗರಕ್ಕೆ ಇಂದಿನಿಂದ ನೀರು ಪೂರೈಕೆ ಸ್ಥಗಿತ

- Advertisement -
- Advertisement -

ಬೆಳ್ತಂಗಡಿ : ವಿಪರೀತ ತಾಪಮಾನದಿಂದ ಹೆಚ್ಚಿನ ನೀರು ಬತ್ತಿ ಹೋಗಿದ್ದು, ಉಳಿದ‌ ನೀರು ಬಿಸಿಯಾಗಿ ಜಲಚರಗಳು , ಮೀನುಗಳು ವಿಲವಿಲ‌ ಒದ್ದಾಡಿ ಪ್ರಾಣ ಬಿಡುತ್ತಿದೆ.

ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ನದಿ ನೀರು ಕೆಸರಾಗಿದ್ದು, ಮೀನು ಸಾವನ್ನಪ್ಪಿ ದುರ್ವಾಸನೆ ಬರುತ್ತಿರುವುದರಿಂದ ನಗರಕ್ಕೆ ಎ.19 ರಿಂದ ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ.

ಬೆಳ್ತಂಗಡಿ ‌ನಗರಕ್ಕೆ ಇದೇ ಸೋಮಾವತಿ‌ ನದಿ ಜೀವನದಿಯಾಗಿದ್ದು ಸದ್ಯ ನೀರು ಬತ್ತಿ ಹೋಗಿರುವುದರಿಂದ ಜನರಿಗೆ ನೀರು ಇಲ್ಲವಂತಾಗಿದೆ. ಅಲ್ಲದೆ ನೀರು ಕೊಳಕಾಗಿರುವುದರಿಂದ ಬಳಸಲು ಅನುಪಯುಕ್ತವಾಗಿದೆ. ನೀರಿನಲ್ಲಿ ಹಲವು ಮೀನುಗಳು ಇದ್ದು ನೀರಿನ ಅಭಾವದಿಂದ ಮೀನುಗಳು ಸಾವನ್ನಪ್ಪುವ ಸಾಧ್ಯತೆ ಇದೆ.

ಬೆಳ್ತಂಗಡಿ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತ ಮಾಡಲಾಗಿದ್ದು‌.ಇನ್ನೂ ಮಳೆ ಬಂದ ಬಳಿಕ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!