Friday, June 5, 2026
Homeತಾಜಾ ಸುದ್ದಿಮಂಗಳೂರಿಗೆ ತಟ್ಟಿಲ್ಲ ಬಂದ್ ಬಿಸಿ, ಬಸ್ ಸಂಚಾರ ಆರಂಭ

ಮಂಗಳೂರಿಗೆ ತಟ್ಟಿಲ್ಲ ಬಂದ್ ಬಿಸಿ, ಬಸ್ ಸಂಚಾರ ಆರಂಭ

- Advertisement -
- Advertisement -

ಮಂಗಳೂರು : ರೈತ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದಿನ ಬಂದ್ ಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದರೂ, ಖಾಸಗಿ ಹಾಗೂ ಸರ್ಕಾರಿ ಬಸ್ ಸಂಚಾರ ಎಂದಿನಂತೆ ಕಾರ್ಯಾರಂಭಿಸಿದೆ. ಹಾಗೇ ಆಟೋ ಹಾಗೇ ಇತರೆ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.

ಜನರು ಕೂಡಾ ಸಹಜ ರೀತಿಯಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬಂದ್ ನ ಯಾವುದೇ ಬಿಸಿ ನಗರದಲ್ಲಿ ಬೆಳಿಗ್ಗೆ ಕಂಡು ಬಂದಿಲ್ಲ.

ಇನ್ನು ಇಂದು ರೈತ ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಗರದಲ್ಲಿ ಗಸ್ತು ಆರಂಭಿಸಿದ್ದಾರೆ.

- Advertisement -

Latest News

error: Content is protected !!