Thursday, June 4, 2026
Homeತಾಜಾ ಸುದ್ದಿಇಂದಾದರೂ ಕೊನೆಯಾಗುತ್ತಾ ರಾಗಿಣಿ, ಸಂಜನಾ ಜೈಲುವಾಸ?..

ಇಂದಾದರೂ ಕೊನೆಯಾಗುತ್ತಾ ರಾಗಿಣಿ, ಸಂಜನಾ ಜೈಲುವಾಸ?..

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನಿದ್ದೆ ಕೆಡಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಈ ಇಬ್ಬರು ನಟಿಯರಿಗೆ ಜಾಮೀನು ಸಿಗಲಿದೆಯಾ ಅಥವಾ ಜೈಲುವಾಸವೇ ಮುಂದುವರೆಯಲಿದೆಯಾ ಎಂಬುದು ಇಂದು ತಿಳಿಯಲಿದೆ.

ಇಂದು ಎನ್ ಡಿಪಿಎಸ್ ನ್ಯಾಯಾಲಯದಲ್ಲಿ ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದು, ಈಗಾಗಲೇ ಜಾರಿ ನಿರ್ದೇಶನಾಲಯವೂ ಸಂಜನಾ ಮತ್ತು ರಾಗಿಣಿ ವಿರುದ್ಧ ಪ್ರಕರಣ ದಾಖಲಸಿಕೊಂಡು ವಿಚಾರಣೆ ಆರಂಭಿಸಿದೆ. ಸಿಸಿಬಿ ಪೊಲೀಸರೊಂದಿಗೆ ಇಡಿ ಅಧಿಕಾರಿಗಳು ಕೂಡ ಇನ್ನೂ ಎರಡು ದಿನಗಳ ಕಾಲ ವಿಚಾರಣೆ ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದ್ದು ಸಂಜೆಯ ವೇಳೆಗೆ ಇಬ್ಬರು ನಟಿಯರ ಭವಿಷ್ಯ ನಿರ್ಧಾರ ವಾಗಲಿದೆ.

- Advertisement -

Latest News

error: Content is protected !!