Tuesday, July 14, 2026
Homeಕರಾವಳಿಉಡುಪಿಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ದೊರೆಯದ ಅವಕಾಶ: ವಾಪಸ್ ತೆರಳಿದ ಹೈಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ವಿದ್ಯಾರ್ಥಿನಿಯರು

ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ದೊರೆಯದ ಅವಕಾಶ: ವಾಪಸ್ ತೆರಳಿದ ಹೈಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ವಿದ್ಯಾರ್ಥಿನಿಯರು

- Advertisement -
- Advertisement -

ಉಡುಪಿ: ಹಿಜಾಬ್ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಬರೆಯದೇ ವಾಪಸ್ ತೆರಳಿದ್ದಾರೆ. ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಯರಾದ ಆಲಿಯಾ ಅಸ್ಸಾದಿ ಮತ್ತು ರೇಷಂ ಪರೀಕ್ಷೆಗೆ ಹಾಜರಾಗಬೇಕಿತ್ತು.

ಶ್ರೀಕೃಷ್ಣ ಮಠದ ಸಮೀಪ ಇರು ವಿದ್ಯೋದಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಲಿಯಾ ಅಸ್ಸಾದಿ ಮತ್ತು ರೇಷಂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಅಂತಾ ಮನವಿ ಮಾಡಿದ್ದರು.

ಕಾಲೇಜು ಪ್ರಾಂಶುಪಾಲರ ಜೊತೆ ಪರೀಕ್ಷೆ ಆರಂಭವಾಗುವವರೆಗೂ ಹಿಜಾಬ್ ಗೆ ಅವಕಾಶ ಕೊಡುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದು, ವಿದ್ಯೋದಯ ಕಾಲೇಜಿಗೆ ತಹಶೀಲ್ದಾರ್ ಕೂಡಾ ಭೇಟಿ ನೀಡಿದ್ದರು. ಹಿಜಾಬ್ ಗೆ ಅವಕಾಶ ದೊರೆಯದ ಕಾರಣ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಿಂದ ವಾಪಸ್ ಮನೆಗೆ ತೆರಳಿದ್ದಾರೆ‌.

- Advertisement -

Latest News

error: Content is protected !!