Wednesday, June 3, 2026
Homeಕರಾವಳಿಉಡುಪಿಉಡುಪಿಯ ಇಂದ್ರಾಳಿ  ಬ್ರಿಡ್ಜ್ ಅವ್ಯವಸ್ಥೆಗೆ ಖಂಡನೆ : ಇಂದ್ರಾಳಿ ಹಳೆ ಬ್ರಿಡ್ಜ್ ಮೇಲೆ  ನಿತ್ಯಾನಂದ ಒಳಕಾಡು...

ಉಡುಪಿಯ ಇಂದ್ರಾಳಿ  ಬ್ರಿಡ್ಜ್ ಅವ್ಯವಸ್ಥೆಗೆ ಖಂಡನೆ : ಇಂದ್ರಾಳಿ ಹಳೆ ಬ್ರಿಡ್ಜ್ ಮೇಲೆ  ನಿತ್ಯಾನಂದ ಒಳಕಾಡು ಉರುಳು ಸೇವೆ

- Advertisement -
- Advertisement -

ಉಡುಪಿ;  ಮಣಿಪಾಲ ರಸ್ತೆಯಲ್ಲಿರುವ ರೈಲ್ವೇ ಬ್ರಿಡ್ಜ್ ಅವ್ಯವಸ್ಥೆಯನ್ನು ಖಂಡಿಸಿ ಉಡುಪಿ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಉರುಳುಸೇವೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ರು.

ಕಳೆದ ಐದು ವರ್ಷಗಳಿಂದ  ರೈಲ್ವೇ ಬ್ರಿಜ್ ಕಾಮಗಾರಿ ನಿರಂತರ ನಡೆಯುತ್ತಿದ್ದು, ಇದರಿಂದ ವಾಹನ‌ಸವಾರರು‌ ಪರದಾಡುವಂತಾಗಿದೆ. ಇದನ್ನು ಖಂಡಿಸಿ  ಮಳೆ ಟ್ರಾಫಿಕ್ ಜಾಮ್ ನಡುವೆ ಹೆದ್ದಾರಿಯಲ್ಲಿ ನಿತ್ಯಾನಂದ ಒಳಕಾಡು ಉರುಳು ಸೇವೆ ಮಾಡಿ ಪ್ರತಿಭಟಿಸಿದರು.

ಇದೇ ವೇಳೆ‌ ಹಳೆ ಬ್ರಿಡ್ಜ್ ನಲ್ಲಿ ಹೊಂಡ ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಕ್ರೋಶ ಹೊರ ಹಾಕಿದ್ದಾರೆ‌.

ಹನುಮಂತ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಪೂಜೆ ಸಲ್ಲಿಸಿ ಇಂದ್ರಾಳಿ ಹಳೆ ಬ್ರಿಡ್ಜ್ ಮೇಲೆ ಉರುಳು ಸೇವೆ ಮಾಡಿದ್ರು.  ಸುಮಾರು 150 ಮೀಟರ್ ಹೊಂಡ ಗುಂಡಿ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ರು.

- Advertisement -

Latest News

error: Content is protected !!