Friday, May 24, 2024
HomeUncategorizedನಿಖಿಲ್- ರೇವತಿ ಮದುವೆಗೆ ಕ್ಷಣಗಣನೆ: ಪಾಸು ಇದ್ದವರಿಗಷ್ಟೇ ಪ್ರವೇಶ

ನಿಖಿಲ್- ರೇವತಿ ಮದುವೆಗೆ ಕ್ಷಣಗಣನೆ: ಪಾಸು ಇದ್ದವರಿಗಷ್ಟೇ ಪ್ರವೇಶ

spot_img
- Advertisement -
- Advertisement -

ರಾಮನಗರ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ, ಚಿತ್ರನಟ ನಿಖಿಲ್- ರೇವತಿ ಕಲ್ಯಾಣಕ್ಕೆ ಬಿಡದಿ‌ ಬಳಿಯ ಕೇತಗಾನಹಳ್ಳಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಕ್ಷಣಗಣನೆ ಆರಂಭವಾಗಿದೆ.

ವಧು-ವರರ ಕುಟುಂಬದ ಕೆಲ ಸದಸ್ಯರು ಈಗಾಗಲೇ ಆಗಮಿಸಿದ್ದಾರೆ. ಫಾರ್ಮ್ ಹೌಸ್‌ಗೆ ಅರ್ಧ ಕಿ.ಮೀ. ದೂರದಲ್ಲಿ ಇರುವ ಬೆಂಗಳೂರು- ಮೈಸೂರು ಹೆದ್ದಾರಿ ತಿರುವಿನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಪಾಸ್ ಇದ್ದವರಿಗಷ್ಟೇ ಒಳಗೆ ಪ್ರವೇಶ ನೀಡಲಾಗುತ್ತಿದೆ. ಮಾಧ್ಯಮಗಳ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಬೆಳಗ್ಗೆ 9.15-9.45 ರ ನಡುವಿನ ಲಗ್ನದಲ್ಲಿ ವಿವಾಹ ನೆರವೇರಲಿದೆ.

- Advertisement -
spot_img

Latest News

error: Content is protected !!