Tuesday, May 21, 2024
Homeತಾಜಾ ಸುದ್ದಿರಾಜ್ಯದಲ್ಲಿ ಮೇ 4ರ ತನಕ ನೈಟ್ ಕರ್ಫ್ಯೂ ಹಾಗೂ ವೀಕ್‌ ಎಂಡ್‌ ಕರ್ಫ್ಯೂ : ರಾಜ್ಯ...

ರಾಜ್ಯದಲ್ಲಿ ಮೇ 4ರ ತನಕ ನೈಟ್ ಕರ್ಫ್ಯೂ ಹಾಗೂ ವೀಕ್‌ ಎಂಡ್‌ ಕರ್ಫ್ಯೂ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ನೈಟ್ ಕರ್ಫೂ ಹಾಗೂ ‘ವೀಕ್‌ ಎಂಡ್‌ ಕರ್ಫ್ಯೂ’ ಜಾರಿ ಗೊಳಿಸಲಾಗಿದೆ ನಾಳೆಯಿಂದ ಮೇ 4ರ ತನಕ ನೈಟ್‌ ಕರ್ಫ್ಯೂ’ ಜಾರಿಗೊಳಿಸಲಾಗುವುದರ ಬಗ್ಗೆ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೆಲವೇ ಗಂಟೆಗಳ ಹಿಂದೆ ಮುಕ್ತಾಯವಾದ ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಕರೋನ ಸ್ಥಿತಿಗತಿಗಳ ಬಗ್ಗೆ ಸಚಿವರು ರಾಜ್ಯಪಾಲರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಶಾಸಕರು ಭಾಗವಹಿಸಿದ್ದರು ಈ ವೇಳೆಯಲ್ಲಿ ಎಲ್ಲರ ಒಮ್ಮತದ ತೀರ್ಮಾನದ ಮೇರೆಗೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಸಭೆ ಮುಕ್ತಾಯವಾದ ಬಳಿಕ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಏಪ್ರಿಲ್ 21 ರಿಂದ ಮೇ 4 ರ ತನಕ ವೀಕ್ ಎಂಡ್ ಕರ್ಪ್ಯೂ ಜಾರಿಯಾಗಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.ಇದೇ ವೇಳೆ ಅವರು ಮಾತನಾಡಿ, ಸಿನಿಮಾ ಹಾಲ್‌ಗಳು ಸ್ವೀಮಿಂಗ್‌ ಪೂಲ್‌ಗಳನ್ನು ಬಂದ್ ಮಾಡಲಾಗಿದೆ. ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಕಟಿಂಗ್‌ ಶಾಪ್‌, ಸಲೂನ್‌, ಬ್ಯೂಟಿ ಪಾಲರ್ಸ್‌ ತೆಗೆಯಲು ಅವಕಾಶ ನೀಡಲಾಗಿದೆ ಎಂದ್ರು

ಇನ್ನೂ ಸರ್ವಪಕ್ಷ ಸಭೆಯಲ್ಲಿ ಸಿಎಂ ಬಿಎಸ್‌ವೈ ಲಾಕ್‌ಡೌನ್‌ ಬಗ್ಗೆ ಸುಳಿವು ನೀಡಿದ್ದರು. ಸಿಎಂ ಸಭೆಯಲ್ಲಿ ಮಾಜಿ ಸಿಎಂ ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು, ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವ ಬಗ್ಗೆ ಚರ್ಚಿಸುತ್ತೇವೆ ಅಂತ ಹೇಳಿದ್ದಾರೆ. ಜನತೆಗೆ ಕಷ್ಟವಾದ್ರೂ ಸರಿ ಲಾಕ್‌ಡೌನ್‌ ಬಗ್ಗೆ ಸಚಿವರ ಜೊತೆಗೆ ಚರ್ಚಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ.

- Advertisement -
spot_img

Latest News

error: Content is protected !!