Thursday, June 4, 2026
Homeಕರಾವಳಿಬೆಳ್ತಂಗಡಿ; ನಿಡ್ಲೆ ಗ್ರಾಮದ ಕಾಂಗ್ರೆಸ್‌ ಬೆಂಬಲಿಗರು ಹರೀಶ್‌ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ಬೆಳ್ತಂಗಡಿ; ನಿಡ್ಲೆ ಗ್ರಾಮದ ಕಾಂಗ್ರೆಸ್‌ ಬೆಂಬಲಿಗರು ಹರೀಶ್‌ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ; ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆ ಪಕ್ಷಕ್ಕೆ ತಾಲ್ಲೂಕಿನಲ್ಲಿ ಬಿಗ್‌ ಶಾಕ್‌ ಎದುರಾಗಿದೆ. ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಫೀಲ್ಡ್‌ ಮಾಡುತ್ತಿದ್ದ ನಿಡ್ಲೆ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರಾದ ರವಿ, ಪ್ರಸಾದ್, ಶಿವಪ್ಪ, ರೋಷನ್, ಪ್ರಶಾಂತ್, ನವೀನ, ರಮೇಶ್, ವಿನೋದ, ಹರೀಶ್ ಮತ್ತು ಮುಂಡಾಜೆಯ ರವಿ ಎಂ.ಎಲ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್‌, ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌,  ಪಕ್ಷದ ಹಿರಿಯ ನಾಯಕರಾದ ಸುಬ್ರಮಣ್ಯ ಅಗರ್ತ, ನಲಿಕೆ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆ, ಸಂಘದ ಕಾರ್ಯದರ್ಶಿ ಅನಂತ ಮುಂಡಾಜೆ, ನಿಡ್ಲೆ ಬೂತ್‌ ಅಧ್ಯಕ್ಷ ನಿತಿನ್ ಗೌಡ, ಕಾರ್ಯದರ್ಶಿ ಸಂತೋಷ್ ಮತ್ತು ಇತರೆ ಬೂತ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!