Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಆಟೋದಲ್ಲಿ‌ ಸ್ಫೋಟ ಪ್ರಕರಣ: ತನಿಖೆಗೆ ಎನ್.ಐ.ಎ ಟೀಂ ಆಗಮನ ಸಾಧ್ಯತೆ

ಮಂಗಳೂರಿನಲ್ಲಿ ಆಟೋದಲ್ಲಿ‌ ಸ್ಫೋಟ ಪ್ರಕರಣ: ತನಿಖೆಗೆ ಎನ್.ಐ.ಎ ಟೀಂ ಆಗಮನ ಸಾಧ್ಯತೆ

- Advertisement -
- Advertisement -

ಮಂಗಳೂರಿನಲ್ಲಿ  ಆಟೋದಲ್ಲಿ ಸ್ಫೋಟ ಪ್ರಕರಣದ ತನಿಖೆಗೆ ಎನ್.ಐ.ಎ ಟೀಂ ಆಗಮನದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ‌.

ಇಂದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ಸಾಧ್ಯತೆ ಇದೆ ಎನ್ನಲಾಗಿದೆ. ನಿನ್ನೆ ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟವಾಗಿರೋದು ಸಾಕಷ್ಟು‌ ಅನುಮಾನ‌ ಮೂಡಿಸಿದೆ.

ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡವೂ ಆಗಮಿಸಲಿದೆ ಎನ್ನಲಾಗಿದೆ. ಘಟನೆಯಲ್ಲಿ ಉಗ್ರರ ‌ಕೈವಾಡವಿದೆಯೋ‌ ಎಂಬ ಆಯಾಮದಲ್ಲಿ ಎನ್.ಐ.ಎ‌ ತನಿಖೆ‌ ನಡೆಸಲಿದೆ.

- Advertisement -

Latest News

error: Content is protected !!